Kolar crime: ಮೂವರು ಬೈಕ್ ಕಳ್ಳರು ಸೆರೆ; ₹30 ಲಕ್ಷ ಮೌಲ್ಯದ ಬೈಕ್‌ಗಳು, ಮೊಬೈಲ್ ವಶಕ್ಕೆ
🎬 Watch Now: Feature Video
ಕೋಲಾರ : ನಗರದ ಗಲ್‌ಪೇಟೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಮೂವರು ಬೈಕ್ ಹಾಗೂ ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ. ಸುಮಾರು 30 ಲಕ್ಷ ರೂ. ಬೆಲೆಬಾಳುವ 30 ವಿವಿಧ ಮಾದರಿಯ ಬೈಕ್‌ಗಳು ಹಾಗೂ 3 ಲಕ್ಷ ಮೌಲ್ಯದ 50 ಮೊಬೈಲ್ ಫೋನ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಾರಂಜಿಕಟ್ಟೆ ಬಡಾವಣೆಯ ಸಂಜಯ್ ಮತ್ತು ಸೈಯದ್ ಇಮ್ರಾನ್ ಹಾಗೂ ಕುಂಬಾರಪೇಟೆ ನಿವಾಸಿ ನಂದಿ ಬಂಧಿತರು. ಕೋಲಾರ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೈಕ್ ಹಾಗೂ ಮೊಬೈಲ್ ಕಳ್ಳತನ ಮಾಡಿದ್ದು, 10ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕದ್ದು ಬೈಕ್, ಮೊಬೈಲ್ಗಳ ಚಾರ್ಸಿ ಹಾಗೂ ಬಿಡಿ ಭಾಗಗಳನ್ನು ಬದಲಾಯಿಸಿ ಮಾರಾಟ ಮಾಡುತ್ತಿದ್ದರು.
ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ವಿವಿಧ ಫ್ಯಾನ್ಸಿ ಬೈಕ್ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಆರೋಪಿಗಳು ಇವರಾಗಿದ್ದು, ಹೆಚ್ಚಾಗಿ ರಾಯಲ್ ಎನ್‌ಫೀಲ್ಡ್ ಸೇರಿದಂತೆ ಹೊಸ ಬೈಕ್ಗಳನ್ನೇ ಕಳವು ಮಾಡುತ್ತಿದ್ದರು. ಈ ಕುರಿತು ಸಾಕಷ್ಟು ಸವಾರರು ದೂರು ನೀಡಿಲ್ಲ. ಹಾಗಾಗಿ ಕೋರ್ಟ್ ಮೂಲಕ ಬೈಕ್ ಹಾಗೂ ಮೊಬೈಲ್‌ಗಳನ್ನು ವಿತರಿಸಲಾಗುವುದು. ಇನ್ನು ಮುಂದೆ ಸಾರ್ವಜನಿಕರು ಸೂಕ್ತ ಸ್ಥಳಗಳಲ್ಲಿ ಹಾಗೂ ಸಿಸಿಟಿವಿ ಕಣ್ಗಾವಲಲ್ಲಿ ಪಾರ್ಕ್ ಮಾಡುವಂತೆ ಎಸ್ಪಿ ನಾರಾಯಣ ಸಲಹೆ ನೀಡಿದ್ದಾರೆ.
ಇದನ್ನೂ ಓದಿ : Police Raid: ತೀರ್ಥಹಳ್ಳಿಯ ರೆಸಾರ್ಟ್ ಮೇಲೆ ಪೊಲೀಸ್ ದಾಳಿ.. ವಿದೇಶಿ ಮದ್ಯ, ಬಂದೂಕು, ಪ್ರಾಣಿ ಕೊಂಬಿನ ಟ್ರೋಫಿ ವಶಕ್ಕೆ