15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ: ಸರ್ಪದ ಗಾತ್ರ ನೋಡಿ ಬೆಚ್ಚಿಬಿದ್ದ ಸ್ಥಳೀಯರು! - ಈಟಿವಿ ಭಾರತ್ ಕನ್ನಡ ನ್ಯೂಸ್
🎬 Watch Now: Feature Video
ಚಿಕ್ಕಮಗಳೂರು : ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿದಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ತರುವೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ತರುವೆ ಗ್ರಾಮದ ರಾಮಚಂದ್ರ ಎಂಬುವರ ಮನೆ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿ ಕೊಂಡಿದೆ. ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಇದಾಗಿದ್ದು, ಕಾಳಿಂಗ ಸರ್ಪವನ್ನು ನೋಡಿದ ಕುಟುಂಬ ಸದಸ್ಯರು, ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಬೆಚ್ಚಿ ಬಿದ್ದಿದ್ದಾರೆ.
ಕೂಡಲೇ ಕುಟುಂಬಸ್ಥರು ಉರಗ ತಜ್ಞ ಆರೀಫ್ ಅವರಿಗೆ ಫೋನ್ ಮಾಡುವುದರ ಮೂಲಕ ಸ್ಥಳಕ್ಕೆ ಕರೆಸಿಕೊಂಡಿದ್ದು, ಸತತ 45 ನಿಮಿಷದ ಕಾಲ ಕಾರ್ಯಾಚರಣೆ ಬಳಿಕ ಈ ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ ಹಿಡಿಯಲಾಯಿತು. ಕಾಳಿಂಗ ಸರ್ಪ ಆಟಾಟೋಪಕ್ಕೆ ಉರಗ ತಜ್ಞ ಆರೀಫ್ ಬೆಚ್ಚಿ ಬಿದ್ದಿದ್ದು, ಕೊನೆಗೂ ಕಾಳಿಂಗ ಸರ್ಪ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಉರಗ ತಜ್ಞ ಆರೀಫ್ ಬಿಟ್ಟು ಬಂದಿದ್ದಾರೆ.
ಇದನ್ನೂ ಓದಿ : 25 ಸಾವಿರಕ್ಕೂ ಹೆಚ್ಚು ಹಾವು ರಕ್ಷಿಸಿದ ಸುರೇಶ್ ಸಾವನ್ನಪ್ಪಿದ್ದು ಹೇಗೆ? ಕಂಪ್ಲೀಟ್ ಡಿಟೇಲ್ಸ್