ಮಹಿಳೆಗೆ ಅಪರೂಪದ ಖಾಯಿಲೆ: ಕಿಮ್ಸ್ ವೈದ್ಯರಿಂದ ಮರುಜೀವ- ವಿಡಿಯೋ - ಉಸಿರಾಟದ ಸಮಸ್ಯೆ
🎬 Watch Now: Feature Video
ಹುಬ್ಬಳ್ಳಿ: 10 ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುವ ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಮಹಿಳೆಯೊಬ್ಬರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ವೈದ್ಯರು ಮರುಜೀವ ನೀಡಿದ್ದಾರೆ. ಮಹಿಳೆಯ ಹೆಸರು ನೀಲವ್ವ ನಾಗರಳ್ಳಿ. ಇವರಿಗೆ ವಯಸ್ಸು 54 ವರ್ಷ. ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ನಿವಾಸಿ.
ಕಳೆದ ಒಂದು ವರ್ಷದಿಂದ ಇವರು ಪೆರಿಕಾರ್ಡಿಯಲ್ ಸಿಸ್ಟ್ (ಹೃದಯದ ಮೇಲೆ ಗೆಡ್ಡೆ) ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಹೃದಯದ ಗೆಡ್ಡೆಯಾದ್ದರಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಅದಲ್ಲದೇ ಮುಖ ಬಾವು ಬರುತ್ತಿತ್ತು. ಕೆಲವು ಕ್ಷಣ ಉಸಿರು ನಿಂತಂತೆಯೂ ಆಗುತ್ತಿತ್ತಂತೆ. ಈ ಕಾಯಿಲೆ ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಕಾಣಿಸಿಕೊಳ್ಳುತ್ತದೆ ಎಂದು ಕಿಮ್ಸ್ ಕಾರ್ಡಿಯಾಲಜಿಸ್ಟ್ ವಿಭಾಗ ಮುಖ್ಯಸ್ಥ ಎಂ.ಎಂ.ಕಟ್ಟಿಮನಿ ಹೇಳಿದರು.
ಚಿಕಿತ್ಸೆ ಕೊಡಿಸಲು ಹಣವಿಲ್ಲದೇ ಕುಟುಂಬದವರು ನೀಲವ್ವ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ನೀಲವ್ವ ಇದೀಗ ಎಂದಿನಂತೆ ಲವಲವಿಕೆಯಿಂದ ಓಡಾಡುತ್ತಿದ್ದಾರೆ. ವೈದ್ಯರ ಕಾರ್ಯಕ್ಕೆ ಕುಟುಂಬ ಕೃತಜ್ಞತೆ ಅರ್ಪಿಸಿದೆ.
ಇದನ್ನೂ ನೋಡಿ: ನವಜಾತ ಶಿಶುವಿನ ನಾಲಗೆಯ ಬುಡದಲ್ಲಿ ಸಿಸ್ಟ್: ಮಂಗಳೂರಿನ ವೈದ್ಯರಿಂದ ಶಸ್ತ್ರಚಿಕಿತ್ಸೆ