ಊಟಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್, ಸವಾರರಿಗೆ ಕಿರಿಕಿರಿ- ವಿಡಿಯೋ - ಪ್ರಧಾನಿ ನರೇಂದ್ರ ಮೋದಿ
🎬 Watch Now: Feature Video
ಚಾಮರಾಜನಗರ : ಗುಡ್ ಫ್ರೈಡೇ ಮತ್ತು ವೀಕೆಂಡ್ ರಜಾ ಮೋಜು ಅನುಭವಿಸಲು ಜನಪ್ರಿಯ ಪ್ರವಾಸಿ ತಾಣ ಊಟಿಗೆ ಸಾವಿರಾರು ಪ್ರವಾಸಿಗರು ತೆರಳುತ್ತಿದ್ದಾರೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ಭೇಟಿ ಹಿನ್ನೆಲೆಯಲ್ಲಿ ಬಂಡೀಪುರದಿಂದ ಮಧುಮಲೈ ರಸ್ತೆಯವರೆಗೂ ಬಿಗಿ ಭದ್ರತೆ ಕೈಗೊಂಡಿರುವುದರಿಂದ ಇಂದು ಕಿಮೀಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದ್ದು ಪ್ರವಾಸಿಗರು ಸುಸ್ತಾದರು.
ಇದನ್ನೂ ಓದಿ : ಗುಡ್ ಫ್ರೈಡೇ 2023.. ಯೇಸುವಿನ ಬಲಿದಾನದ ನೆನಪಿಗಾಗಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿದ ಜನರು: ಯಾವುದೇ ಭದ್ರತಾ ಲೋಪವಾಗದಿರಲು ಎಲ್ಲಾ ವಾಹನಗಳನ್ನು ತಪಾಸಣೆ ಮಾಡಿಯೇ ಪೊಲೀಸರು ಬಿಡುತ್ತಿದ್ದು, ರಜೆಯ ಖುಷಿ ಸವಿಯಲು ತೆರಳಿದವರು ಟ್ರಾಫಿಕ್‌ನಲ್ಲಿ ಸಿಲುಕಿ ಸಂಕಷ್ಟ ಅನುಭವಿಸಿದರು.
ಬಂಡೀಪುರಕ್ಕೆ ಬಂದು ನಿರಾಸೆ: ಪ್ರಧಾನಿ ಅವರ ವಿಶೇಷ ಭದ್ರತಾ ಪಡೆ (SPG) ಗುಂಡ್ಲುಪೇಟೆಯಲ್ಲಿ ಈಗಾಗಲೇ ಸಿದ್ಧತೆಗಳ ಪರಿಶೀಲನೆ ನಡೆಸುತ್ತಿದ್ದು, ಹೆಲಿಪ್ಯಾಡ್, ಸಂಚರಿಸುವ ಮಾರ್ಗ ಎಲ್ಲವನ್ನೂ ತಮ್ಮ ವ್ಯಾಪ್ತಿಗೆ ತೆಗೆದುಕೊಂಡಿದೆ. ಸಫಾರಿ ನಿರ್ಬಂಧದ ಅರಿವಿಲ್ಲದೇ ಬಂಡೀಪುರಕ್ಕೆ ಬಂದು ಕೆಲವರು ನಿರಾಸೆಯಿಂದ ಹಿಂತಿರುಗಿದರು.
ಇದನ್ನೂ ಓದಿ : ಶಿವಮೊಗ್ಗ: ಪ್ರಧಾನಿ ಕಾರ್ಯಕ್ರಮಕ್ಕೆ ಜನಸಾಗರ, ಟ್ರಾಫಿಕ್ ಜಾಮ್