ಕಿಡ್ನ್ಯಾಪ್ ಪ್ರಕರಣ: ಕಾಲ್ ಗರ್ಲ್ ಸೇರಿ 7 ಮಂದಿಯ ಬಂಧನ - ಕಿಡ್ನ್ಯಾಪ್ ಗ್ಯಾಂಗ್
🎬 Watch Now: Feature Video
ಬೆಂಗಳೂರು: ಕಾಲ್ ಗರ್ಲ್ ಸೇರಿ ಇಬ್ಬರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳ ತಂಡದ ಏಳು ಮಂದಿಯನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಎಂಬವರು ನೀಡಿದ ದೂರಿನ ಮೇರೆಗೆ ಪ್ರಿಯಾ, ತಿರುಮಲೇಶ್, ನವೀನ್, ಕೆಂಪರಾಜ್, ಮುಖೇಶ, ಮಂಜುನಾಥ್, ಭರತ್ ಹಾಗೂ ದಲ್ಪೀರ್ ಸಾಹುದ್ ಎಂಬುವರನ್ನು ಬಂಧಿಸಲಾಗಿದೆ.
ವಿವರ: ಅಪಹರಣಕ್ಕೊಳಗಾದ ರಜನಿಕಾಂತ್ ಹಾಗೂ ಮಂಜುನಾಥ್ ಇಬ್ಬರು ಸ್ನೇಹಿತರು. ಯುವತಿ ಪ್ರಿಯಾ ಎಂಬಾಕೆಯನ್ನು ಇವರು ಸಂಪರ್ಕಿಸಿದ್ದರು. ಮಡಿವಾಳದಲ್ಲಿ ಓಯೋ ರೂಮ್ ಮಾಡಿಕೊಂಡು ಯುವತಿ ಜೊತೆ ದೈಹಿಕ ಸಂಪರ್ಕ ಬೆಳೆಸಿಕೊಂಡಿದ್ದರು ಎಂದು ತನಿಖೆಯಿಂದ ಗೊತ್ತಾಗಿದೆ. ಫೆಬ್ರುವರಿ 18 ರಂದು ದೇವರಚಿಕ್ಕನಹಳ್ಳಿಯಿಂದ ಕಾರ್‌ನಲ್ಲಿ ಪಿಕಪ್ ಮಾಡಿಕೊಂಡಿದ್ದಾರೆ. ತಮ್ಮ ಕೆಲಸ ಮುಗಿಸಿಕೊಂಡು ಮತ್ತೆ ಬರುತ್ತಿದ್ದಾಗ ನಾಲ್ಕು ದ್ವಿಚಕ್ರ ವಾಹನಗಳಲ್ಲಿ 8 ಮಂದಿ ಆರೋಪಿಗಳು ಬಂದು ಕಾರು ಅಡ್ಡಗಟ್ಟಿದ್ದಾರೆ.
ನೀವು ಅಪಘಾತವೆಸಗಿದ್ದೀರಾ ಎಂದು ಸುಳ್ಳು ಹೇಳಿದ್ದಾರೆ. ಮಾತಿನ ಚಕಮಕಿ ನಡೆದು ಪೊಲೀಸ್ ಠಾಣೆಗೆ ಹೋಗೋಣ ಎಂದು ಆರೋಪಿಗಳ ಪೈಕಿ ಓರ್ವ ಅಪಹರಣಕ್ಕೊಳಗಾದ ಕಾರು ಹತ್ತಿದ್ದಾನೆ. ಪೊಲೀಸ್ ಠಾಣೆಗೆ ಕರೆದೊಯ್ಯದೇ ಇರುರುವುದನ್ನರಿತ ಕಾರ್‌ನಲ್ಲಿದ್ದ ದೂರುದಾರ ಮಂಜುನಾಥ್, ಕೂಡಲೇ ಹ್ಯಾಂಡ್ ಬ್ರೇಕ್ ಹಾಕಿ ಡೋರ್ ಡೋರ್ ಓಪನ್ ಮಾಡಿ ಚಲಿಸುವ ಕಾರಿನಿಂದ ಪರಾರಿಯಾಗಿದ್ದ. ಬಳಿಕ ಕಾರು ರಾಮನಗರ, ಮಂಡ್ಯ ಮಾರ್ಗವಾಗಿ ಮೈಸೂರಿಗೆ ತೆರಳಿದೆ. ಇತ್ತ ಮಂಜುನಾಥ್ ಬೇಗೂರು ಪೊಲೀಸರಿಗೆ ನೀಡಿದ ದೂರು ಆಧರಿಸಿ ಎಚ್ಚೆತ್ತುಕೊಂಡ ಹಿರಿಯ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಗಳ ಶೋಧ ನಡೆಸಿ ಮೈಸೂರಿನಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ವಿಚಾರಣೆಯಲ್ಲಿ ಕಾರ್‌ನಲ್ಲಿದ್ದ ಯುವತಿ ಆರೋಪಿಗಳ ಗ್ಯಾಂಗ್‌ನ ಸದಸ್ಯೆ ಎಂದು ಗೊತ್ತಾಗಿದೆ. ಪೂರ್ವಸಂಚು ನಡೆಸಿ ಯುವಕರಿಗೆ ಗಾಳ ಹಾಕುತ್ತಿದ್ದಳು. ಅಲ್ಲದೇ ಕಿಡ್ನ್ಯಾಪ್ ಗ್ಯಾಂಗ್ ಈ ಹಿಂದೆ ಯುವತಿಯನ್ನು ಮುಂದಿಟ್ಟುಕೊಂಡು ಸುಲಿಗೆಯಲ್ಲಿ ತೊಡಗಿತ್ತು ಎಂದು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ.ಬಾಬು ತಿಳಿಸಿದ್ದಾರೆ.
ಇದನ್ನೂಓದಿ: ಬೀದರ್ ಕೆಕೆಆರ್ಟಿಸಿ ಡಿಪೋದಲ್ಲಿ ಬಸ್ ಕಳ್ಳತನ: ಸಿಸಿಟಿವಿಯಲ್ಲಿ ದೃಶ್ಯ ಸೆರೆ.. ಬಸ್ಗಾಗಿ ತೀವ್ರ ಶೋಧ!