Watch.. ಗುಲ್ಮಾರ್ಗ್.. ಖೇಲೋ ಇಂಡಿಯಾ ವಿಂಟರ್ ಗೇಮ್ಸ್
🎬 Watch Now: Feature Video
ಗುಲ್ಮಾರ್ಗ್ (ಜಮ್ಮು ಮತ್ತು ಕಾಶ್ಮೀರ): ಇಲ್ಲಿಯ ಸ್ಕೀ ರೆಸಾರ್ಟ್‌ನಲ್ಲಿ ಖೇಲೋ ಇಂಡಿಯಾ ವಿಂಟರ್ ಗೇಮ್ಸ್‌ನ 3ನೇ ಆವೃತ್ತಿ ನಡೆಯುತ್ತಿದ್ದು, ಈ ಬಗ್ಗೆ ಕ್ರೀಡಾ ಸಚಿವ ನಿಸಿತ್ ಪ್ರಮಾಣಿಕ್ ಮಾತನಾಡಿ, ಕ್ರೀಡೆಗೆ ಸಂಬಧಿಸಿದ ಮೂಲಸೌಕರ್ಯಗಳನ್ನು ಸುಧಾರಿಸುವುದು ಸರ್ಕಾರದ ಮೂಲ ಆದ್ಯತೆಯಾಗಿದೆ. ಅಲ್ಲದೇ ಈ ಭಾಗದ ಜನರು ಕ್ರೀಡೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಆದ ಕಾರಣ ಮೂಲಸೌಕರ್ಯಗಳನ್ನು ಸುಧಾರಿಸು ಕೆಲಸಗಳನ್ನು ಮಾಡಲಾಗುತ್ತಿದೆ. ಇನ್ನು ಖೇಲೋ ಇಂಡಿಯಾ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಯೋಜಿಸುವ ಬಗ್ಗೆ ಚಿಂತನೆ ಮಾಡಲಾಗಿತ್ತು. ಆದರೇ ಕರೋನಾ ಕಾರಣದಿಂದಾಗಿ ಅದು ಸಾಧ್ಯವಾಗಿಲ್ಲ ಎಂದರು.
ಇನ್ನು ಆವೃತ್ತಿಯ ಮೂರನೇ ದಿನವಾದ ನಿನ್ನೆ ಐಸ್ ಸ್ಟಾಕ್, ಐಸ್ ಸ್ಕೇಟಿಂಗ್, ಐಸ್ ಹಾಕಿ, ಬಾಬ್ಸ್ಲೀಯಿಂಗ್ ಮತ್ತು ಸ್ಕೆಲ್ಟನ್, ಬ್ಯಾಂಡಿ ಕರ್ಲಿಂಗ್, ಸ್ನೋ ಶೂ, ನಾರ್ಡಿಕ್, ಸ್ಕೀ ಪರ್ವತಾರೋಹಣ, ಆಲ್ಪೈನ್ ಜಿ ಸ್ಲಾಲೋಮ್ ಮತ್ತು ಕ್ರಾಸ್ ಕಂಟ್ರಿ ಕ್ರೀಡಗಳನ್ನು ಏರ್ಪಡಿಸಲಾಗಿತ್ತು. 1000 ಮೀಟರ್ನ ಐಸ್ ಸ್ಕೇಟಿಂಗ್ ಪಂದ್ಯದಲ್ಲಿ ಮಹಾರಾಷ್ಟ್ರ ಮೂಲದ ಸ್ವರಾಲಿ ಅಶುತೋಷ್ ಡಿಯೋ ಪ್ರಥಮ ಸ್ಥಾನ ಪಡೆದರೇ, ಹರಿಯಾಣದ ರೈನಾ ಕುಕ್ರೇಜಾ ಹಾಗೂ ಅನುಷ್ಕಾ ಮರ್ಚೆಂಟ್ ಕ್ರಮವಾಗಿ 2 ಮತ್ತು 3ನೇ ಸ್ಥಾನವನ್ನು ಅಲಂಕರಿಸಿದರು.
ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿದೆ ಪ್ರಪಂಚದ ಅತೀ ದೊಡ್ಡ ಇಗ್ಲೂ ಕೆಫೆ.. ಇಲ್ಲಿ ಏಕಕಾಲಕ್ಕೆ 40 ಜನ ಊಟ ಮಾಡಬಹುದು!