Khalistan: ಕೆನಡಾದ ಭಾರತ ಕಾನ್ಸುಲೇಟ್ ಮುಂಭಾಗ ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ: ವಿಡಿಯೋ - ಭಾರತದ ಕಾನ್ಸುಲೇಟ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/09-07-2023/640-480-18952048-thumbnail-16x9-don1.jpg)
ಟೊರೊಂಟೊ: ಇತ್ತೀಚೆಗೆ ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋದಲ್ಲಿರುವ ಭಾರತದ ದೂತಾವಾಸಕ್ಕೆ ಬೆಂಕಿ ಹಚ್ಚಿದ್ದ ಖಲಿಸ್ತಾನಿ ಬೆಂಬಲಿಗರು, ಇದೀಗ ಕೆನಡಾದ ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಲಸಿಗ ಭಾರತೀಯರು ಕಚೇರಿಯ ಇನ್ನೊಂದು ಬದಿಯಲ್ಲಿ ಸೇರಿ ದೇಶದ ಪರವಾಗಿ ಘೋಷಣೆ ಮೊಳಗಿಸಿದರು.
ಹಲವಾರು ಖಲಿಸ್ತಾನಿ ಪ್ರತಿಭಟನಾಕಾರರು ಕಾನ್ಸುಲೇಟ್ ಹೊರಗೆ ಖಲಿಸ್ತಾನಿ ಧ್ವಜಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಭಾರತದ ಧ್ವಜಕ್ಕೆ ಅವಮಾನಿಸಿದ ದೃಶ್ಯ ಕೂಡ ಕಂಡುಬಂತು. ಈ ದೇಶ ವಿರೋಧಿಗಳಿಗೆ ಸಮಾನಾಂತರವಾಗಿ ಎದುರು ರಸ್ತೆಯಲ್ಲಿ ಜಮಾಯಿಸಿದ ಭಾರತೀಯರು ದೇಶದ ಪರ ಧ್ವನಿಯೆತ್ತಿ ಸವಾಲು ಹಾಕಿದರು.
ಖಲಿಸ್ತಾನ್ ಟೈಗರ್ ಫೋರ್ಸ್ ಮತ್ತು ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯ ಮುಂದಾಳು ಹರ್ದೀಪ್ ಸಿಂಗ್ ನಿಜ್ಜರ್ ಸಾವಿಗೆ ಆಕ್ರೋಶ ವ್ಯಕ್ತಪಡಿಸಿ ಖಲಿಸ್ತಾನಿಗಳು ಈ ಪ್ರತಿಭಟನೆ ನಡೆಸಿದರು. ಕೆನಡಾವಲ್ಲದೇ, ಅಮೆರಿಕ, ಇಂಗ್ಲೆಂಡ್ಗಳಲ್ಲೂ ಇದೇ ರೀತಿಯ ರ್ಯಾಲಿಗಳನ್ನು ನಡೆಸಲು ಘೋಷಿಸಲಾಗಿದೆ. ಇತ್ತೀಚೆಗಷ್ಟೇ ಸ್ಯಾನ್ಫ್ರಾನ್ಸಿಸ್ಕೋದಲ್ಲಿನ ಕಾನ್ಸುಲೇಟ್ ಒಳಗೆ ನುಗ್ಗಿದ ಉಗ್ರರು ಬೆಂಕಿ ಹಚ್ಚಿದ್ದರು.
ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕಿಲ್ ಇಂಡಿಯಾ ಘೋಷವಾಕ್ಯದೊಂದಿಗೆ ಖಲಿಸ್ತಾನ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನು ಅಮೆರಿಕ ಸರ್ಕಾರ ಕೂಡ ಖಂಡಿಸಿತ್ತು.
ಇದನ್ನೂ ಓದಿ: Khalistan radicals: ಅಮೆರಿಕದ ಭಾರತೀಯ ಕಾನ್ಸುಲೇಟ್ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು: ವಿಡಿಯೋ