ಹುಬ್ಬಳ್ಳಿಯಲ್ಲಿ ಕೆಜಿಎಫ್-2 ಹವಾ: ಅಭಿಮಾನಿಗಳ ಸಂಭ್ರಮ - KGF 2 released at Hubli
🎬 Watch Now: Feature Video
ಹುಬ್ಬಳ್ಳಿ (ಧಾರವಾಡ): ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್-2 ದೇಶಾದ್ಯಂತ ಬಿಡುಗಡೆಯಾದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಸಂಭ್ರಮಸಿದ್ದಾರೆ. ನಟ ಯಶ್ ಕಟೌಟ್ಗೆ ಕ್ಷೀರಾಭಿಷೇಕ ಮಾಡಿದ ಅಭಿಮಾನಿಗಳು, ಕುಂಬಳ ಕಾಯಿ, ತೆಂಗಿನ ಕಾಯಿ ಒಡೆದು ಚಿತ್ರದ ಯಶಸ್ಸಿಗೆ ಶುಭ ಕೋರಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರ ಸೇರಿದಂತೆ ಬಹುತೇಕ ಸಿನಿಮಾ ಮಂದಿರದ ಎದುರು ಸಂಭ್ರಮಿಸಿದ ಅಭಿಮಾನಿಗಳು ಕೆಜಿಎಫ್-2 ಶತದಿನೋತ್ಸವದ ದಾಖಲೆ ಬರೆಯಲಿ ಅಂತ ಶುಭ ಹಾರೈಸಿದರು.
Last Updated : Feb 3, 2023, 8:22 PM IST