ನೃತ್ಯದ ಮೂಲಕ ಟೀಂ ಇಂಡಿಯಾಗೆ ಶುಭಕೋರಿದ ಕಡಲನಗರಿಯ ಪುಟಾಣಿಗಳು: ವಿಡಿಯೋ - ವಿಶ್ವಕಪ್ ಪಂದ್ಯ 2023
🎬 Watch Now: Feature Video
Published : Nov 19, 2023, 1:23 PM IST
ಕಾರವಾರ: ಇಲ್ಲಿನ ನೃತ್ಯ ಶಾಲೆಯೊಂದರ ವಿದ್ಯಾರ್ಥಿಗಳು ಕಡಲತೀರದಲ್ಲಿ ಡ್ಯಾನ್ಸ್ ಮಾಡುವ ಮೂಲಕ ವಿಶಿಷ್ಟವಾಗಿ ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಿದರು. ಸ್ಟಾರ್ ಚಾಯ್ಸ್ ಡಾನ್ಸ್ ಅಕಾಡೆಮಿ ವಿದ್ಯಾರ್ಥಿಗಳು ನಗರದ ರವೀಂದ್ರನಾಥ ಟ್ಯಾಗೋರ್ ಕಡಲತೀರದಲ್ಲಿ "ಚೆಕ್ ದೆ ಇಂಡಿಯಾ" ಹಾಡಿಗೆ ಆಕರ್ಷಕವಾಗಿ ಡ್ಯಾನ್ಸ್ ಮಾಡಿದರು. 20ಕ್ಕೂ ಹೆಚ್ಚು ನೃತ್ಯ ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪುಟಾಣಿಗಳಾದ ದಿಶಾ ಹಾಗೂ ಖುಷಿ ಮಾತನಾಡಿ, "ಸ್ಟಾರ್ ಚಾಯ್ಸ್ ಡಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳಾದ ನಾವು ಡ್ಯಾನ್ಸ್ ಮೂಲಕ ಭಾರತ ತಂಡಕ್ಕೆ ಶುಭಾಶಯ ಕೋರಿದ್ದೇವೆ. ನಮ್ಮ ತಂಡ ಜಯಶಾಲಿಯಾಗಲಿದೆ. ಕೊಯ್ಲಿ, ರೋಹಿತ್ ಶರ್ಮಾ ಆಡಬೇಕು. ಈ ಸಲ ನಾವು ಗೆದ್ದು ಬರಲೇ ಬೇಕು" ಎಂದು ಶುಭಾಶಯ ಕೋರಿದ್ದಾರೆ.
ಮಕ್ಕಳ ಪಾಲಕರಾದ ಲಕ್ಷ್ಮೀಧರ ಮಾತನಾಡಿ, "ಭಾರತ ತಂಡ ಕ್ರಿಕೆಟ್ ದಿಗ್ಗಜ ಹಾಗೂ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಅತ್ಯತ್ತಮ ಫಾರ್ಮ್ನಲ್ಲಿದೆ. ತಂಡದ ಎಲ್ಲ ಸ್ಥಾನಗಳಿಂದಲೂ ಉತ್ತಮ ಪ್ರದರ್ಶನ ಕಂಡುಬರುತ್ತಿದೆ. ಈ ಬಾರಿ ಒಂದು ಸೋಲನ್ನೂ ಕಾಣದ ಭಾರತ ಫೈನಲ್ ಪ್ರವೇಶ ಮಾಡಿದ್ದು ದೇಶಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಇದರಿಂದ ತಂಡ ಗೆಲ್ಲುವುದು ನಿಶ್ಚಿತ. ಈ ಸಲ ಕಪ್ ನಮ್ಮದೇ" ಎಂದರು.
ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್ ಫೈನಲ್: ಟೀಂ ಇಂಡಿಯಾಗೆ ಶುಭ ಕೋರಿದ ಶಿವಮೊಗ್ಗದ ಕ್ರಿಕೆಟ್ ಅಭಿಮಾನಿಗಳು