ಕರುನಾಡ ಬಾವುಟ ಹಿಡಿದು ಕನ್ನಡ ಹಾಡು ಹಾಡಿ ಟಿಬೆಟಿಯನ್ನರ ರಾಜ್ಯೋತ್ಸವ ಸಂಭ್ರಮ-ವಿಡಿಯೋ - ಹನೂರಿನಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ
🎬 Watch Now: Feature Video
Published : Nov 2, 2023, 7:22 AM IST
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರಿನಲ್ಲಿ ಬುಧವಾರ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಕನ್ನಡ ಪ್ರೇಮಕ್ಕೆ ಮನಸೋಲದವರುಂಟೇ ಎಂಬ ಮಾತಿಗೆ ಉದಾಹರಣೆಯಂತೆ, ಹನೂರು ತಾಲೂಕಿನ ಒಡೆಯರಪಾಳ್ಯ ಟಿಬೆಟಿಯನ್ ಕ್ಯಾಂಪ್ನ ಜನರೂ ಕೂಡ 'ಕರ್ನಾಟಕ'ದ ಸುವರ್ಣ ಮಹೋತ್ಸವದಲ್ಲಿ ಭಾಗಿಯಾಗಿ ಗಮನ ಸೆಳೆದರು.
ಸಾಂಪ್ರದಾಯಿಕ ಟಿಬೆಟಿಯನ್ ದಿರಿಸು ಧರಿಸಿದ ಟಿಬೆಟಿಯನ್ನರು ಕನ್ನಡ ಬಾವುಟ ಹಿಡಿದು ಕುಣಿದು ಕುಪ್ಪಳಿಸಿದರು. ಅಲ್ಲದೆ, ಕಾರ್ಯಕ್ರಮದಲ್ಲಿ ಜಿಗ್ಮೆ ಚೋಡಾನ್ ಎಂಬ ಮಹಿಳೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯಿಸಿರುವ 'ಮುಂಗಾರು ಮಳೆ' ಕನ್ನಡ ಸಿನಿಮಾದ 'ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು..' ಎಂಬ ಹಾಡು ಹಾಡಿ ಸಭಿಕರನ್ನು ಖುಷಿಯಿಂದ ಕುಣಿಯುವಂತೆ ಮಾಡಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಟಿಬೆಟಿಯನ್ ಗುರು ದಲೈ ಲಾಮ ಅವರಿಗೆ ನೊಬೆಲ್ ಪ್ರಶಸ್ತಿ ಸಂದು 33 ವರ್ಷಗಳಾದ ಹಿನ್ನೆಲೆಯಲ್ಲಿ ಟಿಬೆಟಿಯನ್ ಕ್ಯಾಂಪ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಮಹಿಳೆ ಇದೇ ಹಾಡು ಹಾಡಿ ಕುಣಿದು ಸಂತಸಪಟ್ಟಿದ್ದರು. ವಿಡಿಯೋ ಕೂಡ ತುಂಬಾ ವೈರಲ್ ಆಗಿತ್ತು.
ಇದನ್ನೂ ಓದಿ: ಮೈಗೆ ಹಳದಿ, ಕೆಂಪು ಬಣ್ಣ ಬಳಿದುಕೊಂಡು ರಾಜ್ಯೋತ್ಸವ ಆಚರಿಸಿದ ದಾವಣಗೆರೆಯ ರಕ್ತದಾನಿ: ವಿಡಿಯೋ