ಛತ್ತೀಸ್‌ಗಢ: ಕನ್ನಡದಲ್ಲಿ ಸೀತಾಪಹರಣ ನಾಟಕ ಪ್ರದರ್ಶಿಸಿದ ಕರ್ನಾಟಕದ ಕಲಾವಿದರು
🎬 Watch Now: Feature Video
ರಾಯಪುರ್ (ಛತ್ತೀಸ್‌ಗಢ): ಛತ್ತೀಸ್‌ಗಢದ ರಾಯಗಡ ಜಿಲ್ಲೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ರಾಮಾಯಣ ಮಹೋತ್ಸವದಲ್ಲಿ ಕರ್ನಾಟಕದ ಕಲಾವಿದರು ಕನ್ನಡ ಭಾಷೆಯಲ್ಲಿ ಸೀತಾಪಹರಣ ನಾಟಕವನ್ನು ಪ್ರದರ್ಶಿಸಿದರು. ಕಾರ್ಯಕ್ರಮದ ಮೊದಲ ದಿನ ರಾವಣನು ಸೀತೆಯನ್ನು ಅಪಹರಿಸುವ ದೃಶ್ಯವನ್ನು ಕನ್ನಡ ಭಾಷೆಯಲ್ಲೇ ನೃತ್ಯ ನಾಟಕದ ಮೂಲಕ ಪ್ರಸ್ತುತಪಡಿಸಲಾಯಿತು.
ಮಹೋತ್ಸವದಲ್ಲಿ ಕಲಾವಿದರ ವೇಷಭೂಷಣ ಮತ್ತು ತೊಟ್ಟಿರುವ ಕಿರೀಟಗಳನ್ನು ನೋಡಲು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಯಕ್ಷಗಾನ ಶೈಲಿಯ ನೃತ್ಯ ನಾಟಕವನ್ನು ನೋಡಲು ಜನರು ಉತ್ಸುಕರಾಗಿದ್ದರು. ಬಹಳ ಆಸಕ್ತಿಯಿಂದ ಕರಾವಳಿಯ ಗಂಡು ಕಲೆಯೆಂದೇ ಪ್ರಸಿದ್ಧಿ ಪಡೆದಿರುವ ಯಕ್ಷಗಾನವನ್ನು ಜನರು ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಯಕ್ಷಗಾನ ಕಲಾವಿದರು, "ತಮ್ಮ ಪೂರ್ವಜರು ಕಳೆದ 90 ವರ್ಷಗಳಿಂದ ಯಕ್ಷಗಾನವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಯಕ್ಷ ರಂಗದಲ್ಲಿ ಕಿರೀಟಕ್ಕೆ ಬಹುಮುಖ್ಯ ಪಾತ್ರವಿದೆ. ಈ ಕಿರೀಟದಿಂದಲೇ ಕಲಾವಿದನ ಪಾತ್ರವು ಬಹಿರಂಗಗೊಳ್ಳುತ್ತದೆ. ಹೀಗಾಗಿ ಕಿರೀಟ ಮತ್ತು ತೊಟ್ಟಿರುವ ಆಭರಣಗಳಿಗೆ ಯಕ್ಷಗಾನದಲ್ಲಿ ಅದರದ್ದೇ ಆದ ಪ್ರಾಶಸ್ತ್ಯ ಇದೆ" ಎಂದು ಹೇಳಿದರು.
ಇದನ್ನೂ ಓದಿ: ಜೂ.11 ರಿಂದ ಬಸ್ ಪ್ರಯಾಣ ಫ್ರೀ..ಫ್ರೀ.. ನನ್ನ ಹೆಂಡತಿಗೂ ಉಚಿತ, ರಾಜ್ಯದ ಮುಖ್ಯ ಕಾರ್ಯದರ್ಶಿಗೂ ಉಚಿತ ಎಂದ ಸಿಎಂ