ದೇಹದಲ್ಲಿ 251 ಹುತಾತ್ಮ ಯೋಧರ ಹೆಸರುಗಳ ಹಚ್ಚೆ! ಹೀಗೊಬ್ಬ ದೇಶಾಭಿಮಾನಿ: ವಿಡಿಯೋ - soldiers name on body
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/09-07-2023/640-480-18951483-thumbnail-16x9-don1.jpg)
ಹರಿದ್ವಾರ (ಉತ್ತರಾಖಂಡ): ದೇಹ ಪ್ರೀತಿಯಲ್ಲ, ದೇಶ ಪ್ರೀತಿಯೇ ಮೊದಲು ಎಂಬುದನ್ನು ಇಲ್ಲೊಬ್ಬ ವ್ಯಕ್ತಿ ತೋರಿಸಿದ್ದಾರೆ. ಉತ್ತರಾಖಂಡದ ಹರಿದ್ವಾರಕ್ಕೆ ಕನ್ವರ್ ಯಾತ್ರೆ ಕೈಗೊಂಡಿರುವ ಉತ್ತರ ಪ್ರದೇಶದ ಕವಾಂಡಿಯಾ ನಿವಾಸಿಯಾದ ವಿಜಯ್ ಹಿಂದೂಸ್ತಾನಿ ಎಂಬವರು ತಮ್ಮ ದೇಹದ ತುಂಬೆಲ್ಲ ಹುತಾತ್ಮರಾದ ಯೋಧರ ಹೆಸರನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಲ್ಲದೇ, ದೇಹವನ್ನು ರಾಷ್ಟ್ರಧ್ವಜದಿಂದ ತುಂಬಿಸಿದ್ದಾರೆ.
2019ರಿಂದ ಈವರೆಗೂ ಗಡಿಯಲ್ಲಿ ದೇಶ ರಕ್ಷಣೆಯ ವೇಳೆ ಹುತಾತ್ಮರಾದ 251 ಯೋಧರ ಹೆಸರನ್ನು ಬೆನ್ನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಈ ಮೂಲಕ ವೀರಯೋಧರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ. ಬಿದಿರಿನಿಂದ ಮಾಡಿದ ರಥದಲ್ಲಿ ಶಿವನಮೂರ್ತಿಯ ಸಮೇತ ಕನ್ವರ್ ಯಾತ್ರೆ ನಡೆಸುತ್ತಿರುವ ಮಾರ್ಗಮಧ್ಯೆ ವಿಜಯ್ ಅವರ ಈ ವಿಶೇಷತೆ ಗಮನ ಸೆಳೆಯಿತು. ತಮ್ಮ ದೇಹಕ್ಕೆ 51 ತ್ರಿವರ್ಣ ಧ್ವಜಗಳನ್ನು ಪಿನ್ನಿಂದ ಚುಚ್ಚಿಕೊಂಡಿದ್ದಾರೆ.
'ಈಟಿವಿ ಭಾರತ್' ಜೊತೆ ಮಾತನಾಡಿದ ವಿಜಯ್, "ಗಡಿಯಲ್ಲಿ ಜೀವದ ಹಂಗು ತೊರೆದು ದೇಶ ಕಾಯುತ್ತಿರುವ ನಮ್ಮ ಸೈನಿಕರ ಸುರಕ್ಷತೆಗಾಗಿ ನಾನು ಶಿವನ ಕನ್ವರ್ ಯಾತ್ರೆ ಕೈಗೊಂಡಿದ್ದೇನೆ. ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಒಟ್ಟು 251 ಯೋಧರ ಹೆಸರನ್ನು ಮೈಮೇಲೆ ಕೆತ್ತಿಸಿಕೊಂಡಿದ್ದೇನೆ. ಪುಲ್ವಾಮಾದಂತಹ ದುರಂತ ಘಟನೆ ಪುನರಾವರ್ತನೆಯಾಗುವುದನ್ನು ನಾನು ಬಯಸುವುದಿಲ್ಲ. ನಮ್ಮ ಯೋಧರು ಪ್ರಾಣ ಕಳೆದುಕೊಳ್ಳುತ್ತಿರುವುದು ಜೀವ ಹಿಂಡುತ್ತಿದೆ. ಹೀಗಾಗಿ ಗಡಿ ರಕ್ಷಣೆಯಲ್ಲಿ ತೊಡಗಿರುವ ವೀರ ಯೋಧರ ಯೋಗಕ್ಷೇಮ, ಸುರಕ್ಷತೆಗಾಗಿ ಸರ್ವಶಕ್ತನಾದ ಶಿವನಲ್ಲಿ ಪ್ರಾರ್ಥಿಸುವೆ" ಎಂದರು.
ಇದನ್ನೂ ಓದಿ: Khalistan: ಕೆನಡಾದ ಭಾರತ ಕಾನ್ಸುಲೇಟ್ ಮುಂಭಾಗ ಖಲಿಸ್ತಾನಿ ಬೆಂಬಲಿಗರ ಪ್ರತಿಭಟನೆ: ವಿಡಿಯೋ