ಉಡುಪಿ: ರಂಗೋಲಿಯಲ್ಲಿ ಮೂಡಿದ ಕಾಂತಾರ - ಈಟಿವಿ ಭಾರತ ಕನ್ನಡ

🎬 Watch Now: Feature Video

thumbnail

By

Published : Oct 24, 2022, 6:47 AM IST

Updated : Feb 3, 2023, 8:29 PM IST

ಉಡುಪಿ: ಸದ್ಯ ಕರ್ನಾಟಕದಲ್ಲಿ ಕಾಂತಾರ ಚಿತ್ರದ ಹವಾ ಜೋರಾಗಿದೆ. ಎಲ್ಲೆಲ್ಲೂ ಕಾಂತಾರ ಸಿನಿಮಾದ್ದೇ ಸುದ್ದಿ. ಅದರಂತೆ ಉಡುಪಿ ಜಿಲ್ಲೆಯಲ್ಲಿ ದೀಪಾವಳಿಗೆ ಕಾಂತಾರ ರಂಗೋಲಿಯೊಂದು ಸಿದ್ಧವಾಗಿದೆ. ಸಾಲಿಗ್ರಾಮ ವಿಶ್ವಕರ್ಮ ಸಭಾ ಭವನದಲ್ಲಿ ಸುಮಾರು 7 ಅಡಿ ಎತ್ತರ 9 ಅಡಿ ಅಗಲವಿರುವ ಕಾಂತಾರ ರಂಗೋಲಿ ಜನರನ್ನು ಆಕರ್ಷಿಸುತ್ತಿದೆ. ಸ್ಫೂರ್ತಿ ಆಚಾರ್ಯ ಮತ್ತು ಅಶ್ವತ್ಥ್ ಆಚಾರ್ಯ ಅವರು ಈ ರಂಗೋಲಿ ರಚನೆ ಮಾಡಿದ್ದು, ಕರಾವಳಿ ಸಂಸ್ಕೃತಿ, ಆಚರಣೆಗೆ ಬೆಳಕು ಹಿಡಿದ ಕಾಂತಾರ ಚಲನಚಿತ್ರಕ್ಕೆ ರಂಗೋಲಿಯ ಅಭಿನಂದನೆ ಸಲ್ಲಿಸಿದ್ದಾರೆ. ಪಂಜುರ್ಲಿ ದೈವದ ವೇಷ ಕಟ್ಟಿರುವ ಮತ್ತು ಕೋಣ ಓಡಿಸುವ ರಿಷಬ್​ ಶೆಟ್ಟಿಯವರನ್ನು ಹೋಲುವ ರಂಗೋಲಿ ರಚನೆ ಮಾಡಿದ್ದು, ನೋಡಿದವರು ಕಲಾವಿದರ ಕೈ ಚಳಕಕ್ಕೆ ಬೇಸ್ ಅಂತಿದ್ದಾರೆ.
Last Updated : Feb 3, 2023, 8:29 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.