ಕೊಪ್ಪಳದ ಸೀಮಂತ ಕಾರ್ಯಕ್ರಮದಲ್ಲೂ ಮೊಳಗಿದ ಕನ್ನಡ - ಸೀಮಂತ ಕಾರ್ಯಕ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16806296-thumbnail-3x2-sanju.jpg)
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ಕನ್ನಡ ಉಳಿಸಿ, ಬೆಳಸಿ ಎಂದು ಪತ್ರ ಹಿಡಿದು ಸೀಮಂತ ಕಾರ್ಯ ಮಾಡುವ ಮೂಲಕ ವಿಶೇಷವಾಗಿ ರಾಜ್ಯೋತ್ಸವ ಆಚರಣೆ ಮಾಡಿದ್ದಾರೆ. ಕಡೇಕೊಪ್ಪ ಗ್ರಾಮದ ಬಸವರಾಜ ಮತ್ತು ಅವರ ಪತ್ನಿ ಶಾಂತಾ ಜಿಗೇರಿಯಿಂದ ಮಾದರಿ ರಾಜ್ಯೋತ್ಸವ ಆಚರಿಸಲಾಗಿದೆ. ಸೀಮಂತ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಕನ್ನಡ ಬಾವುಟ ನೀಡಿ ಭಾಷಾಭಿಮಾನ ಮೆರೆಯಲಾಗಿದೆ. ಗರ್ಭಿಣಿ ಶಾಂತಾ ಜಿಗೇರಿ ಅವರ ಈ ಕಾರ್ಯಕ್ಕೆ ಕನ್ನಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated : Feb 3, 2023, 8:31 PM IST