ಬಿಸಿಲ ನಗರಿಯಲ್ಲಿ ಸಂಭ್ರಮದ ಕನಕದಾಸ ಜಯಂತಿ: ಡೊಳ್ಳು ಕುಣಿತದ - ವಿಡಿಯೋ ನೋಡಿ
🎬 Watch Now: Feature Video
ರಾಯಚೂರು: ಭಕ್ತ ಶ್ರೇಷ್ಠ ಕನಕದಾಸ ಜಯಂತಿಯನ್ನು ರಾಯಚೂರು ಜಿಲ್ಲಾದ್ಯಂತ ಸಂಭ್ರಮ - ಸಡಗರದಿಂದ ಆಚರಿಸಿದರು. ನಗರದ ಗಂಜ್ ವೃತ್ತದ ಬಳಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕನಕದಾಸರ ಪುತ್ಥಳಿಗೆ ಪೂಜೆ ನೇರವೇರಿಸಿದ ನಂತರ ಹಾರ ಹಾಕುವ ಮೂಲಕ ಜಯಂತಿ ಆಚರಿಸಲಾಯಿತು.
ಇದಾದ ನಂತರದಲ್ಲಿ ಕನಕದಾಸ ಬೃಹತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದ್ದು, ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಭಾಗವಹಿಸಿದವು. ಈ ವೇಳೆ, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್ ಡೊಳ್ಳು ಭಾರಿಸುವ ಮೂಲಕ ಹೆಜ್ಜೆ ಹಾಕಿದರು. ಶಾಸಕ ಬಸವನಗೌಡ ದದ್ದಲ್ ಜೊತೆಗೆ ಸಮುದಾಯದ ಮುಖಂಡರು ಡೊಳ್ಳು ಬಾರಿಸಿರುವುದರ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರುಗು ತರಿಸಿದರು. ಪುತ್ಥಳಿಗೆ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್, ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ, ಎಸ್ಪಿ ನಿಖಿಲ್.ಬಿ., ಜಿಲ್ಲಾ ಪಂಚಾಯಿತಿ ಸಿಇಒ ಪಾಂಡ್ವೆ ರಾಹುಲ್ ತುಕಾರಾಮ್, ಕುರುಬು ಸಮುದಾಯ ಮುಖಂಡರು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಅನೇಕರು ಪಾಲ್ಗೊಂಡದರು.
ಇದನ್ನೂ ಓದಿ: ಮೈತೇಯಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಣದೀಪ್ ಹೂಡಾ-ಲಿನ್ ಲೈಶ್ರಾಮ್:ವಿಡಿಯೋ