ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ವಿರುದ್ಧ ಕೆ. ಅಣ್ಣಾಮಲೈ ವಾಗ್ದಾಳಿ.. - ಉದಯನಿಧಿ ಸ್ಟಾಲಿನ್
🎬 Watch Now: Feature Video
ರಾಮೇಶ್ವರಂ (ತಮಿಳುನಾಡು): ''ರಾಮೇಶ್ವರಂನಲ್ಲಿ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಪಾಪದ ಯಾತ್ರೆ'' ಎಂದು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಟೀಕಿಸಿದ್ದಾರೆ. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು, ''ಬಿಜೆಪಿಯ ಎನ್ ಮನ್, ಎನ್ ಮಕ್ಕಳ್ ಯಾತ್ರೆಗೆ ಜನರ ಉತ್ಸಾಹಭರಿತ ಪ್ರತಿಕ್ರಿಯೆ ಲಭಿಸಿರುವುದರಿಂದ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಅವರು ತಲ್ಲಣಗೊಂಡಂತೆ ಕಾಮೆಂಟ್ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
''ಉದಯನಿಧಿ ಸ್ಟಾಲಿನ್ ಮತ್ತು ಎಂಕೆ ಸ್ಟಾಲಿನ್ ಅವರ ಅಳಿಯ ಶಬರೇಶನ್ ಸೇರಿದಂತೆ 7ರಿಂದ 8 ಜನರ ವಿರುದ್ಧ ಅಂದ್ರೆ, ಅವರು ಲೂಟಿ ಮಾಡಿದ ಸುಮಾರು 1,30,000 ಕೋಟಿ ರೂ.ಗಳ ಡಿಎಂಕೆ ಫೈಲ್ಸ್ ಭಾಗ- 1 ಅನ್ನು ನಾವು ಬಿಡುಗಡೆ ಮಾಡಿದ್ದೇವೆ'' ಎಂದು ಕಿಡಿಕಾರಿದರು.
''ತಮಿಳುನಾಡಿನ ಮೀನುಗಾರರಿಗೆ ನೀಡಿದ ಸಾಕಷ್ಟು ಚುನಾವಣಾ ಭರವಸೆಗಳು ಈಡೇರದೇ ಉಳಿದಿರುವ ಕಾರಣ, ಭ್ರಷ್ಟ ಡಿಎಂಕೆ ಸರ್ಕಾರವು ಇಂದು ಭ್ರಷ್ಟ ಮಂತ್ರಿಗಳನ್ನು ಉಳಿಸುವ ಮತ್ತು ಮೊದಲ ಕುಟುಂಬದ ಸಂಪತ್ತನ್ನು ವಿಸ್ತರಿಸುವತ್ತ ಗಮನಹರಿಸುತ್ತದೆ'' ಎಂದು ಅವರು, ''ಡಿಎಂಕೆ ಹಾಗೂ ಕಾಂಗ್ರೆಸ್ ಹುಸಿ ಭರವಸೆಗಳನ್ನು ನೀಡಿದ್ದರಿಂದ ನಮ್ಮ ಮೀನುಗಾರರಿಗೆ ಸಮುದ್ರದಲ್ಲಿ ಹೆಚ್ಚಿನ ಅಸುರಕ್ಷಿತ ಪರಿಸ್ಥಿತಿ ಉಂಟಾಗಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮುಂಬೈನಲ್ಲಿ ಮತ್ತೆ ಉಗ್ರರ ದಾಳಿ ಭೀತಿ: ಕೊಲಾಬಾ ಹೌಸ್ ಭದ್ರತೆ ಹೆಚ್ಚಳ