ಸಂಗಟಿಕೊಪ್ಪ ಬಸವೇಶ್ವರ ಜೋಡಿ ನಂದಿಕೋಲ ಉತ್ಸವ ಸಂಭ್ರಮ: ಯುವಕರ ಸಾಹಸ ಪ್ರದರ್ಶನ - ಬೆಳಗಾವಿ ನಂದಿಕೋಲ ಉತ್ಸವ

🎬 Watch Now: Feature Video

thumbnail

By ETV Bharat Karnataka Team

Published : Sep 12, 2023, 7:45 PM IST

ಬೆಳಗಾವಿ: ಬೈಲಹೊಂಗಲ ತಾಲೂಕಿನ ಒಕ್ಕುಂದ ಗ್ರಾಮದಲ್ಲಿ ಪ್ರತಿವರ್ಷದಂತೆ ಶ್ರಾವಣ ಕಡೆ ಸೋಮವಾರ ಶ್ರದ್ಧಾ ಭಕ್ತಿಯಿಂದ ಜೋಡಿ ನಂದಿಕೋಲ ಉತ್ಸವ ಯಶಸ್ವಿಯಾಗಿ ಜರುಗಿತು. ಒಬ್ಬರೇ ನಂದಿಕೋಲ ಹೊತ್ತುಕೊಂಡು ಯುವಕರು ಗಮನ ಸೆಳೆದರು. ಧರ್ಮಗುರು ಬಸವಣ್ಣನವರ ಭಾವಚಿತ್ರ, ಲಿಂಗಾಯತ ಧರ್ಮದ ಧರ್ಮ ಗ್ರಂಥ ವಚನ ಸಾಹಿತ್ಯದ ಕಟ್ಟನ್ನು ಪಾಲಿಕೆಯಲ್ಲಿ ಇಡಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಂಚರಿಸಿತು. ಈ ವೇಳೆ ಗ್ರಾಮದ ಮುತ್ತೈದೆಯರು ಪಾಲಿಕೆಗೆ ಆರತಿ ಬೆಳಗಿದ್ರೆ, ಯುವಕರು ನೀರು ಹಾಕಿ ದಾರಿಯನ್ನು ಶುದ್ಧಗೊಳಿಸಿದರು.‌ ಭಜನಾ ಮಂಡಳಿಯವರು, ತಮಟೆ ವಾದ್ಯ ಮೇಳಗಳು ಮೆರವಣಿಗೆಯ ಮೆರಗನ್ನು ಮತ್ತಷ್ಟು ಹೆಚ್ಚಿಸಿದವು. 

ವಚನಗಳ ಅದ್ಭುತ ಗಾಯನ: ಗ್ರಾಮದ ಭಜನಾ ಮಂಡಳಿಯವರು ವಿಶ್ವಗುರು ಬಸವಣ್ಣನವರ ಕಳಬೇಡ, ಕೊಲಬೇಡ, ಹುಸಿಯ‌ ನುಡಿಯಲುಬೇಡ. ದೇವಲೋಕ, ಮೃತ್ಯುಲೋಕವೆಂಬುದು ಬೇರಿಲ್ಲ ಕಾಣಿರೋ ಸೇರಿ ಮತ್ತಿತರ ವಚನಗಳನ್ನು ಅದ್ಭುತವಾಗಿ ಹಾಡಿದರು.

ಯುವಕರ ಸಾಹಸ: 40 ಅಡಿಗಿಂತಲೂ ಅಧಿಕ ಎತ್ತರವಿರುವ ನಂದಿಕೋಲಗಳನ್ನು ಎತ್ತುವ ವೇಳೆ ಯುವಕರು ತಮ್ಮ ಸಾಹಸ ಪ್ರದರ್ಶಿಸಿದರು. ಒಬ್ಬೊಬ್ಬರೇ ನಂದಿಕೋಲು ಕೈಯಲ್ಲಿ ಹಿಡಿದುಕೊಂಡು ಮುಂದೆ ಸಾಗುವ ಮೂಲಕ ಕೆಲ ಯುವಕರು ಎಲ್ಲರ ಹುಬ್ಬೇರುವಂತೆ ಮಾಡಿದರು. ಬಳಿಕ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಮಾತನಾಡಿದ ಗ್ರಾಮದ ಹಿರಿಯ ಬಸನಗೌಡ ಗಿಡಬಸಪ್ಪನವರ, ನಮ್ಮ ಹಿರಿಯರ ಕಾಲದಿಂದಲೂ ಈ ಪದ್ಧತಿ ಮಾಡಿಕೊಂಡು ಬಂದಿದ್ದೇವೆ. ದೇವರು‌ ನಮ್ಮ ಎಲ್ಲ ಇಷ್ಟಾರ್ಥಗಳನ್ನು ಈಡೇರಿಸಿದ್ದು, ಎಲ್ಲರಿಗೂ‌ ಮತ್ತಷ್ಟು ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಗ್ರಾಮಸ್ಥ ಶಿವನಗೌಡ ಪಾಟೀಲ ಮಾತನಾಡಿ, 12ನೇ ಶತಮಾನದಿಂದಲೂ ಶ್ರಾವಣ ಮಾಸದ ಕೊನೆಯ ಸೋಮವಾರ ಜೋಡು ನಂದಿಕೋಲ ಮತ್ತು ಪಾಲಿಕೆ ಮೆರವಣಿಗೆ ಮಾಡಿಕೊಂಡು‌ ಬರಲಾಗುತ್ತಿದೆ.‌ ಈ ದಿನ ಎಲ್ಲಿಯೇ ಇದ್ದರೂ ಕೂಡ ಊರಿಗೆ ಬಂದು ಮೆರವಣಿಗೆಯಲ್ಲಿ ನಾವೆಲ್ಲಾ ಭಾಗಿಯಾಗುತ್ತೇವೆ. ಇದು ನಮಗೆಲ್ಲಾ ದೊಡ್ಡ ಹಬ್ಬ ಎಂದರು. 

ಇದನ್ನೂ ಓದಿ: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ವೈಭವದ ತೆರೆ : ಅದ್ಧೂರಿಯಾಗಿ ನಡೆದ ಮುದ್ದುಕೃಷ್ಣನ ಲೀಲೋತ್ಸವ ವಿಟ್ಲಪಿಂಡಿ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.