ಕಾರು ಕಳ್ಳತನ ಪ್ರಕರಣ.. ಹಾಸನದಲ್ಲಿ ಅಂತಾರಾಜ್ಯ ಖದೀಮನ ಬಂಧನ - Digital lock opener
🎬 Watch Now: Feature Video
ಹಾಸನ : ಅಂತಾರಾಜ್ಯ ಕಾರು ಕಳ್ಳತನದ ಆರೋಪಿಯನ್ನು ಬಂಧಿಸುವಲ್ಲಿ ಹಾಸನ ಪೊಲೀಸರು ಯಶಸ್ವಿಯಾಗಿದ್ದಾರೆ. ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೆ ಎಸ್ ದಿಲೀಪ್ (39) ಬಂಧಿತ ಆರೋಪಿಯಾಗಿದ್ದು, ಈತನಿಂದ ಸುಮಾರು 8.18 ಲಕ್ಷ ಮೌಲ್ಯದ ನಗದು ಸೇರಿದಂತೆ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಹರಿರಾಂ ಶಂಕರ್ ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಕೇರಳದ ಕಣ್ಣೂರು ಜಿಲ್ಲೆಯ ಕೆ ಎಸ್ ದಿಲೀಪ್ ಹಾಸನ ಬಡಾವಣೆ, ಸಕಲೇಶಪುರ, ಆಲೂರು ತಾಲೂಕುಗಳಲ್ಲಿ ಕಳ್ಳತನ ಮಾಡಿದ್ದ ಮಾರುತಿ ಓಮ್ನಿ, ಬುಲೆರೋ, ಆಲ್ಟೋ ಸೇರಿದಂತೆ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಈತ ಕಾರುಗಳನ್ನು ಕಳ್ಳತನ ಮಾಡಿ, ಬಿಡಿ ಭಾಗಗಳನ್ನ ಮಾರಾಟ ಮಾಡಿರುವ ಸಂಬಂಧ ಸುಮಾರು ಮೂರು ಲಕ್ಷ ನಗದನ್ನು ವಶಕ್ಕೆ ಪಡೆದಿದ್ದು, ಈತನ ವಿರುದ್ಧ ಬೆಂಗಳೂರಿನಲ್ಲಿ 30ಕ್ಕೂ ಹೆಚ್ಚು ವಾಹನ ಕಳ್ಳತನ ಪ್ರಕರಣ ದಾಖಲಾಗಿವೆ ಮಾಹಿತಿ ನೀಡಿದರು.
ಈ ತಾಲೂಕಿನಲ್ಲಿ ವರ್ಷಗಳಿಂದಲೂ ವಾಹನ ಕಳ್ಳತನ ಮಾಡುತ್ತಿದ್ದ ಈತನ ಬಳಿ ಇದ್ದ ಡಿಜಿಟಲ್ ಲಾಕ್ಗಳನ್ನು ತೆರೆಯುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ. 2007 ರಿಂದ ಈಚೆಗಿನ ಮಾಡೆಲ್ ವಾಹನಗಳನ್ನೇ ಗುರಿಯಾಗಿಟ್ಟುಕೊಂಡು, ಈತ ಕಳ್ಳತನ ಮಾಡುತ್ತಿದ್ದ ಎಂದು ಹೇಳಿದ್ದಾರೆ.
ಇದನ್ನೂ ಓದಿ: 6 ತಿಂಗಳಲ್ಲಿ 50ಕ್ಕೂ ಹೆಚ್ಚು ಕಳ್ಳತನ ಪ್ರಕರಣ ಭೇದಿಸಿದ ದಾವಣಗೆರೆ ಪೊಲೀಸರು