ಹೊಸ ಸಂಸತ್‌ ಭವನ ಹೇಗಿದೆ ಗೊತ್ತಾ? ವಿಡಿಯೋ ನೋಡಿ - ಹೊಸ ಸಂಸತ್​ ಭವನ

🎬 Watch Now: Feature Video

thumbnail

By

Published : May 28, 2023, 2:21 PM IST

ನವದೆಹಲಿ: ಭಾರತದ ಶ್ರೀಮಂತ ಪರಂಪರೆಯಾದ ವೈವಿಧ್ಯತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಹೊಸ ಸಂಸತ್ ಭವನ ಇಂದು ಲೋಕಾರ್ಪಣೆಗೊಂಡಿದೆ. ಉತ್ತರ ಪ್ರದೇಶದ ಮಿರ್ಜಾಪುರದಿಂದ ರತ್ನಗಂಬಳಿಗಳು, ತ್ರಿಪುರಾದಿಂದ ಬಿದಿರು ನೆಲಹಾಸು, ರಾಜಸ್ಥಾನದ ಕಲ್ಲಿನ ಕೆತ್ತನೆಗಳು ಭವ್ಯ ಭವನದಲ್ಲಿ ಮಿರುಗುತ್ತಿವೆ. ಕಟ್ಟಡದಲ್ಲಿ ಬಳಸಲಾದ ತೇಗದ ಮರಗಳನ್ನು ಮಹಾರಾಷ್ಟ್ರದ ನಾಗ್ಪುರದಿಂದ ಸಂಗ್ರಹಿಸಲಾಗಿತ್ತು. ಕೆಂಪು, ಬಿಳಿ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ತರಲಾಗಿದೆ.  

ತ್ರಿಕೋನಾಕಾರದ ನಾಲ್ಕು ಅಂತಸ್ತಿನ ಕಟ್ಟಡ 64,500 ಚದರ ಮೀಟರ್ ವಿಸ್ತೀರ್ಣ ಹೊಂದಿದೆ. ಲೋಕಸಭೆ, ರಾಜ್ಯಸಭಾ ಚೇಂಬರ್‌ಗಳಲ್ಲಿ ಫಾಲ್ಸ್ ಸೀಲಿಂಗ್‌ಗಳಿಗೆ ಉಕ್ಕಿನ ರಚನೆಯನ್ನು ಕೇಂದ್ರಾಡಳಿತ ಪ್ರದೇಶ ದಮನ್ ಮತ್ತು ದಿಯುನಿಂದ ಪಡೆಯಲಾಗಿದೆ. ಪೀಠೋಪಕರಣಗಳನ್ನು ಮುಂಬೈನಲ್ಲಿ ತಯಾರಿಸಲಾಗಿದೆ. ಕಲ್ಲಿನ 'ಜಾಲಿ' (ಲ್ಯಾಟಿಸ್) ಕೆಲಸಗಳನ್ನು ರಾಜಸ್ಥಾನದ ರಾಜನಗರ ಮತ್ತು ಉತ್ತರ ಪ್ರದೇಶದ ನೋಯ್ಡಾದಿಂದ ತರಲಾಗಿದೆ.

ಅಶೋಕ ಲಾಂಛನದ ಸಾಮಗ್ರಿಗಳನ್ನು ಮಹಾರಾಷ್ಟ್ರದ ಔರಂಗಾಬಾದ್ ಮತ್ತು ರಾಜಸ್ಥಾನದ ಜೈಪುರದಿಂದ ತರಲಾಗಿದ್ದು, ಲೋಕಸಭೆ, ರಾಜ್ಯಸಭೆಯ ಸಭಾಂಗಣಗಳ ಬೃಹತ್ ಗೋಡೆಗಳನ್ನು ಧರಿಸಿರುವ ಅಶೋಕ ಚಕ್ರವನ್ನು ಮಧ್ಯಪ್ರದೇಶದ ಇಂದೋರ್‌ನಿಂದ ಪಡೆಯಲಾಗಿದೆ. ಹೊಸ ಸಂಸತ್ ಕಟ್ಟಡವು ನಿರ್ಮಾಣ ಚಟುವಟಿಕೆಗಳಿಗೆ ಕಾಂಕ್ರೀಟ್ ಮಿಶ್ರಣವನ್ನು ರಚಿಸಲು ಹರಿಯಾಣದ ಚಾರ್ಕಿ ದಾದ್ರಿಯಿಂದ ತಯಾರಿಸಿದ ಮರಳು ಬಳಸಲಾಗಿದೆ. ಕಟ್ಟಡ ಮೂರು ಮುಖ್ಯದ್ವಾರಗಳನ್ನು ಹೊಂದಿದೆ. ಜ್ಞಾನ ದ್ವಾರ, ಶಕ್ತಿ ದ್ವಾರ ಮತ್ತು ಕರ್ಮ ದ್ವಾರ ಎಂದು ಹೆಸರಿಡಲಾಗಿದೆ. ಲೋಕಸಭೆಯಲ್ಲಿ 888 ಸದಸ್ಯರು ಮತ್ತು ರಾಜ್ಯಸಭಾ ಕೊಠಡಿಯಲ್ಲಿ 300 ಸದಸ್ಯರು ಆರಾಮವಾಗಿ ಕುಳಿತುಕೊಳ್ಳಬಹುದು. ಉಭಯ ಸದನಗಳ ಜಂಟಿ ಅಧಿವೇಶನದ ಸಂದರ್ಭದಲ್ಲಿ ಲೋಕಸಭೆಯ ಕೊಠಡಿಯಲ್ಲಿ ಒಟ್ಟು 1,280 ಸದಸ್ಯರು ಕುಳಿತುಕೊಳ್ಳಲು ಅವಕಾಶವಿದೆ.

ಇದನ್ನೂ ಓದಿ: ಭವ್ಯ ಸಂಸತ್‌ ಭವನ ಉದ್ಘಾಟನೆ: ಲೋಕಸಭೆಯಲ್ಲಿ ಕಾರ್ಯಕ್ರಮ- ನೇರಪ್ರಸಾರ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.