ಹಾವನ್ನು ಬಾಯಲ್ಲಿ ಕಚ್ಚಿ ಕೊಂದ 3 ವರ್ಷದ ಮಗು! - ಕೊತ್ವಾಲಿ ಮೊಹಮ್ಮದಾಬಾದ್ ಪ್ರದೇಶದ ಮದ್ನಾಪುರ ಗ್ರಾಮ
🎬 Watch Now: Feature Video
ಫರೂಕಾಬಾದ್ (ಉತ್ತರ ಪ್ರದೇಶ): ರಾಜ್ಯದ ಫರೂಕಾಬಾದ್ ಜಿಲ್ಲೆಯಲ್ಲಿ ಅಚ್ಚರಿಯ ಜೊತೆಗೆ ಹೃದಯವಿದ್ರಾವಕ ಘಟನೆಯೊಂದು ವರದಿಯಾಗಿದೆ. ಮಗುವೊಂದು ಹಾವನ್ನು ಬಾಯಲ್ಲಿ ಕಚ್ಚಿ ಕೊಂದು ಹಾಕಿದೆ. ಬಳಿಕ ಮಗುವಿನ ಸ್ಥಿತಿ ತೀರಾ ಹದಗೆಟ್ಟಿದ್ದು, ಕುಟುಂಬಸ್ಥರು ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ಮಗು ಆರೋಗ್ಯವಾಗಿದೆ ಎಂದು ತಿಳಿದುಬಂದಿದೆ.
ಕೊತ್ವಾಲಿ ಮೊಹಮ್ಮದಾಬಾದ್ ಪ್ರದೇಶದ ಮದ್ನಾಪುರ ಗ್ರಾಮದ ನಿವಾಸಿ ದಿನೇಶ್ ಸಿಂಗ್ ಅವರ 3 ವರ್ಷದ ಮಗ ಶನಿವಾರದಂದು ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ. ಅದೇ ಸಮಯದಲ್ಲಿ ಅಲ್ಲಿಗೆ ಒಂದು ಹಾವು ಬಂದಿದೆ. ಇದನ್ನು ಕಂಡ ಆ ಪುಟ್ಟ ಬಾಲಕ ಯಾವುದೇ ಭಯವಿಲ್ಲದೇ ಎತ್ತಿಕೊಂಡು ಬಾಯಲ್ಲಿ ಕಚ್ಚಿ ಸಾಯಿಸಿದ್ದಾನೆ. ಬಳಿಕ ಮಗುವಿನ ಸ್ಥಿತಿ ತೀರ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು.
ಈಗ ಮಗು ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಸರಿಯಾದ ಸಮಯಕ್ಕೆ ಬಾಲಕನನ್ನು ಆಸ್ಪತ್ರೆಗೆ ಕರೆತಂದದ್ದರಿಂದ ಆತನ ಜೀವ ಉಳಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. ಈ ಘಟನೆ ನೋಡಿದ ಬಳಿಕವಾದರೂ ನಿಮ್ಮ ಮಗು ಹೊರಗೆ ಆಟವಾಡುತ್ತಿದ್ದರೆ ಕೊಂಚ ಜಾಗರೂಕರಾಗಿರಿ.
ಇದನ್ನೂ ಓದಿ: ಮನೆಯಂಗಳದಲ್ಲಿ ಚಿರತೆ; ಸಿದ್ಧಾಪುರದಲ್ಲಿ ಜನರ ಆತಂಕ- ಸಿಸಿಟಿವಿ ವಿಡಿಯೋ