ಕೈಬೀಸಿ ಕರೆಯುತ್ತಿದೆ ಏಷ್ಯಾದ ಅತಿ ದೊಡ್ಡ ಟುಲಿಪ್ ಗಾರ್ಡನ್!- ವಿಡಿಯೋ - ಪುಷ್ಪ ಪ್ರದರ್ಶನ
🎬 Watch Now: Feature Video
ಜಮ್ಮು ಮತ್ತು ಕಾಶ್ಮೀರ: ಶ್ರೀನಗರದ ದಾಲ್ ಸರೋವರ ಮತ್ತು ಜಬರ್ವಾನ್ ಬೆಟ್ಟಗಳ ಮಧ್ಯೆ ಇರುವ ಏಷ್ಯಾದ ಅತಿದೊಡ್ಡ ಇಂದಿರಾ ಗಾಂಧಿ ಟುಲಿಪ್ ಉದ್ಯಾನವನ ನಿನ್ನೆಯಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಪ್ರವಾಸಿಗರು ಮೋಹಕ ಪುಷ್ಪ ಪ್ರದರ್ಶನ ಕಣ್ತುಂಬಿಕೊಳ್ಳುತ್ತಿದ್ದಾರೆ.
30 ಹೆಕ್ಟೇರ್ ಪ್ರದೇಶದಲ್ಲಿರುವ ಈ ಉದ್ಯಾನವನದಲ್ಲಿ 15 ಲಕ್ಷಕ್ಕೂ ವಿವಿಧ ಪ್ರಭೇದಗಳು, ಬಣ್ಣಗಳು ಮತ್ತು ಪರಿಮಳಗಳಿಂದ ಕೂಡಿದ ಹೂವುಗಳಿವೆ. ಉದ್ಘಾಟನಾ ಸಮಾರಂಭ ನೆರವೇರಿಸಿ ಮಾತನಾಡಿದ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, "ಈ ವರ್ಷ ಉದ್ಯಾನದಲ್ಲಿ ಸುಮಾರು 68 ವಿಧದ ತಳಿಗಳ ಟುಲಿಪ್ ಹೂವುಗಳನ್ನು ಕಾಣಬಹುದು" ಎಂದರು.
"ಪ್ರತೀ ವರ್ಷ ನಾವು ಈ ಉದ್ಯಾನವನ್ನು ವಿಸ್ತರಿಸುತ್ತೇವೆ. ಹೊಸ ತಳಿಗಳನ್ನು ಪ್ರದರ್ಶಿಸುತ್ತೇವೆ. ಈ ವರ್ಷವೂ ಸಹ ಕಾರಂಜಿ ಚಾನಲ್ ಅನ್ನು ವಿಸ್ತರಿಸಿದ್ದೇವೆ. ವಿವಿಧ ಬಣ್ಣಗಳ 15 ಲಕ್ಷ ಟುಲಿಪ್‌ಗಳ ಜೊತೆಗೆ ಹಯಸಿಂತ್‌ಗಳು, ಡ್ಯಾಫಡಿಲ್‌ಗಳು, ಮಸ್ಕರಿ ಮತ್ತು ಸೈಕ್ಲಾಮೆನ್ ಒಳಗೊಂಡಂತೆ ಇತರೆ ವಸಂತದ ಹೂವುಗಳನ್ನು ಪ್ರದರ್ಶಿಸಲಾಗುತ್ತಿದೆ" ಎಂದು ಉದ್ಯಾನದ ಉಸ್ತುವಾರಿ ಇನಾಮ್-ಉಲ್-ರೆಹಮಾನ್ ಹೇಳಿದ್ದಾರೆ.
ಇಂದಿರಾ ಗಾಂಧಿ ಟುಲಿಪ್ ಗಾರ್ಡನ್ ಅನ್ನು ಈ ಹಿಂದೆ ಸಿರಾಜ್ ಬಾಗ್ ಎಂದು ಕರೆಯಲಾಗುತ್ತಿತ್ತು. ಇದನ್ನು 2008 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಆಗಿನ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ಅವರು ಉದ್ಘಾಟಿಸಿದ್ದರು.
ಇದನ್ನೂ ಓದಿ: ಸಿಆರ್ಝೆಡ್ ನಿಯಮ ಉಲ್ಲಂಘನೆ: ಕಾರವಾರ ಕಡಲ ತೀರದ ಪ್ರವಾಸಿ ತಾಣಗಳ ನೆಲಸಮ ಆತಂಕ