ಏರ್ ಇಂಡಿಯಾ ವಿಮಾನ ಸ್ಪೋಟಿಸುವ ಬೆದರಿಕೆ: ಖಲಿಸ್ತಾನ್​ ಉಗ್ರರಿಗೆ ಭಾರತ ಖಡಕ್​ ಎಚ್ಚರಿಕೆ

🎬 Watch Now: Feature Video

thumbnail

By ANI

Published : Nov 10, 2023, 7:58 AM IST

ನವದೆಹಲಿ: ನವೆಂಬರ್ 19ರಂದು ಏರ್ ಇಂಡಿಯಾ ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿರುವ ಪ್ರತ್ಯೇಕತಾವಾದಿ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು ಎಂಬಾತನಿಗೆ ಭಾರತ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಡಕ್​ ಎಚ್ಚರಿಕೆ ನೀಡಿದೆ. 

ಇಂತಹ ಭಯೋತ್ಪಾದಕ ಬೆದರಿಕೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಹಿಂಸಾಚಾರವನ್ನು ಪ್ರಚೋದಿಸುವ ಮತ್ತು ನಮ್ಮ ನಾಯಕತ್ವವನ್ನು ಬೆದರಿಸುವ ಭಯೋತ್ಪಾದಕ ಚಟುವಟಿಕೆಗಳ ಮೇಲೆ ವಿದೇಶಿ ಸರ್ಕಾರಗಳ ಜೊತೆ ನಾವು ತೊಡಗಿಸಿಕೊಂಡಿದ್ದೇವೆ. ಭಾರತ ಈ ರೀತಿಯ ಭಯೋತ್ಪಾದಕತೆಯನ್ನು ಹತ್ತಿಕ್ಕಲು ಇನ್ನೂ ಹೆಚ್ಚಿನ ಅಗತ್ಯ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 

ಏರ್ ಇಂಡಿಯಾ ವಿಮಾನವನ್ನು ವಿಶ್ವದಾದ್ಯಂತ ಎಲ್ಲಿಯೂ ಹಾರಲು ಬಿಡುವುದಿಲ್ಲ ಎಂದು ಖಲಿಸ್ತಾನಿ ಭಯೋತ್ಪಾದಕ ಬೆದರಿಕೆ ಹಾಕಿರುವ ವಿಡಿಯೋವನ್ನು ನವೆಂಬರ್ 4ರಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿತ್ತು. ಅಲ್ಲದೆ, ವಿಡಿಯೋದಲ್ಲಿ ಆ ದಿನ ಏರ್ ಇಂಡಿಯಾ ವಿಮಾನಗಳನ್ನು ಹತ್ತುವುದನ್ನು ತಪ್ಪಿಸುವಂತೆ ಸಿಖ್ಖರನ್ನು ಆತ ಕೇಳಿಕೊಂಡಿದ್ದನು.

ಇದನ್ನೂ ಓದಿ: ಖಲಿಸ್ತಾನಿ ಉಗ್ರನಿಂದ ಏರ್ ಇಂಡಿಯಾ ವಿಮಾನ ಸ್ಫೋಟಿಸುವ ಬೆದರಿಕೆ: ದೆಹಲಿ, ಪಂಜಾಬ್‌ ಏರ್​ಪೋರ್ಟ್​ಗಳಲ್ಲಿ ಅಲರ್ಟ್

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.