ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಆಕ್ರಮಣಕಾರಿ ಹೆಬ್ಬಾವು: ಸ್ನೇಕ್ ಕಿರಣ್ರಿಂದ ರಕ್ಷಣೆ - ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ
🎬 Watch Now: Feature Video
ಶಿವಮೊಗ್ಗ: ಕಾಫಿ ತೋಟದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಹೆಬ್ಬಾವನ್ನು ಸ್ನೇಕ್ ಕಿರಣ್ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ. ಇಂದು ಶಿವಮೊಗ್ಗ ತಾಲೂಕು ಭೈರನಕೊಪ್ಪ ಗ್ರಾಮದ ಚೈತನ್ಯ ಎಂಬುವರ ಕಾಫಿ ತೋಟದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ಚೈತನ್ಯ ತಕ್ಷಣ ಸ್ನೇಕ್ ಕಿರಣ್ಗೆ ತಿಳಿಸಿದ್ದಾರೆ. ಹೆಬ್ಬಾವು ಹಿಡಿಯಲು ಬಂದ ಕಿರಣ್ ಮೇಲೆ ದಾಳಿ ಮಾಡಿದೆ. ಹಾವಿನ ಪ್ರತಿರೋಧದ ನಡುವೆಯೂ ಹಾವನ್ನು ಸೆರೆಹಿಡಿದು ಸುರಕ್ಷಿತವಾಗಿ ಹಿಡಿದು ಅರಣ್ಯಾಧಿಕಾರಿಗಳ ಸಮ್ಮುಖದಲ್ಲಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಹಾವು ಸುಮಾರು 8 ಅಡಿ ಉದ್ದ, 9 ಕೆ.ಜಿ 300 ಗ್ರಾಂ ಇತ್ತು.
Last Updated : Feb 3, 2023, 8:33 PM IST