ಫೈನಲ್‌ ಪಂದ್ಯದತ್ತ ದಿಟ್ಟ ಹೆಜ್ಜೆ ಹಾಕಿದ ಟೀಂ ಇಂಡಿಯಾ​; ಸ್ಟೇಡಿಯಂ ಸುತ್ತ ಜನಸಾಗರ! -ವಿಡಿಯೋ - ಅಹಮದಾಬಾದ್​ ಕ್ರೀಡಾಂಗಣ

🎬 Watch Now: Feature Video

thumbnail

By ETV Bharat Karnataka Team

Published : Nov 19, 2023, 12:37 PM IST

ಅಹಮದಾಬಾದ್​: ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಏಕದಿನ ವಿಶ್ವಕಪ್​ ಫೈನಲ್​ಗೆ ಕ್ಷಣಗಣನೆ ಆರಂಭವಾಗಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಅಂತಿಮ ಕದನ ನಡೆಯಲಿದೆ. ಭಾರತ ಕ್ರಿಕೆಟ್​ ತಂಡದ ಆಟಗಾರರು ತಂಗಿದ್ದ ಹೋಟೆಲ್​ನಿಂದ ಬಸ್​ನಲ್ಲಿ ಸ್ಟೇಡಿಯಂಗೆ ತೆರಳಿದರು. ಮಧ್ಯಾಹ್ನ ಪಂದ್ಯ ಆರಂಭವಾಗಲಿದ್ದರೂ ಬೆಳಗ್ಗೆಯಿಂದಲೇ ಕ್ರಿಕೆಟ್​ ಪ್ರಿಯರು ಕ್ರೀಡಾಂಗಣದ ಮುಂದೆ ಜಮಾಯಿಸಿದ್ದಾರೆ.

ಭಾರತ ತಂಡದ ಜೆರ್ಸಿ, ಸ್ಟಾರ್​ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್​ ರಾಹುಲ್​, ಬೂಮ್ರಾ ಸೇರಿದಂತೆ ಆಟಗಾರರ ಹೆಸರುಳ್ಳ ಜೆರ್ಸಿ ಮತ್ತು ಫೋಟೋಗಳನ್ನು ಹಿಡಿದುಕೊಂಡು ಅಭಿಮಾನಿಗಳು ಕ್ರೀಡಾಂಗಣದ ಮುಂದೆ 'ಬಿಗ್​' ಕದನಕ್ಕಾಗಿ ಕಾಯುತ್ತಿದ್ದಾರೆ.

ಕ್ರೀಡಾಂಗಣಕ್ಕೆ ಪೊಲೀಸರು ಬಿಗಿಭದ್ರತೆ ಒದಗಿಸಿದ್ದು, 6 ಸಾವಿರ ಖಾಕಿ ಸರ್ಪಗಾವಲು ಹಾಕಲಾಗಿದೆ. ಒಳಗಡೆ ಮತ್ತು ಹೊರಭಾಗದಲ್ಲಿ ತಲಾ 3 ಸಾವಿರ ಪೊಲೀಸರು ಭದ್ರತೆ ಒದಗಿಸಲಿದ್ದಾರೆ. ಭಾರತ ತಂಡ ವಿಶ್ವಕಪ್​ ಎತ್ತಿಹಿಡಿಯಬೇಕು ಎಂದು 140 ಕೋಟಿಗೂ ಅಧಿಕ ಭಾರತೀಯರು ದೇವಾನುದೇವತೆಗಳಿಗೆ ಮೊರೆ ಹೋಗುತ್ತಿದ್ದಾರೆ. 2003 ರ ಫೈನಲ್​ ಸೇಡು ತೀರಿಸಿಕೊಳ್ಳಲಿ ಎಂಬುದು ಭಾರತ ಕ್ರಿಕೆಟ್​​ ತಂಡದ ಅಭಿಮಾನಿಗಳ ಆಶಯ.

ಇದನ್ನೂ ಓದಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್: ಕೊಹ್ಲಿ, ಅಶ್ವಿನ್​ಗೆ ವಿಶಿಷ್ಟ ದಾಖಲೆ ಬರೆಯುವ ಅವಕಾಶ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.