ದಾವಣಗೆರೆ ಇಸಾಹಾತ್-ಉಲ್-ಉಲ್ಮಾ ಮದರಸಾದಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ - Etv Bharat Kannada
🎬 Watch Now: Feature Video
ದಾವಣಗೆರೆ: ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ ಇಸಾಹಾತ್-ಉಲ್-ಉಲ್ಮಾ ಮದರಸಾದಲ್ಲಿ ಮಕ್ಕಳು ಹಾಗು ಉಲೇಮಾಗಳು ರಾಷ್ಟ್ರಧ್ವಜ ಹಾರಿಸಿದರು. ವೇಷಧಾರಿ ಮಕ್ಕಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ್ ಮಾತಾ ಕೀ ಜೈ ಎಂಬ ಘೋಷಣೆಗಳನ್ನು ಕೂಗುತ್ತಾ ನಲ್ಲೂರು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆದರು. ಹಿಂದೂ, ಮುಸ್ಲಿಂ, ಸಿಖ್ಖರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇಂದು ಸಂತೋಷದ ದಿನ ಸಂಭ್ರಮದಿಂದ ಕಳೆಯಿರಿ. ದೇಶದಲ್ಲಿ ಯುವಜನತೆ ಪ್ರತಿ ಕೆಲಸ ಕಾರ್ಯಗಳಲ್ಲಿ ಮುಂದಿರಬೇಕು. ಆಗ ಮಾತ್ರ ನಮ್ಮ ದೇಶ ಉಳಿಯಲು ಸಾಧ್ಯ ಎಂದು ಈ ಸಂದರ್ಭದಲ್ಲಿ ಮೌಲ್ವಿಯೊಬ್ಬರು ಹೇಳಿದರು.
Last Updated : Feb 3, 2023, 8:26 PM IST