ಎಲ್ಲೆಂದರಲ್ಲಿ ಮೊಬೈಲ್ ಬಳಸುತ್ತೀರಾ? ಈ ವಿಡಿಯೋ ನೋಡಿ ಎಚ್ಚೆತ್ತುಕೊಳ್ಳಿ - incident of mobile snatching
🎬 Watch Now: Feature Video
ಸೂರತ್ (ಗುಜರಾತ್): ಹಾಡಹಗಲೇ ಕಳ್ಳತನ ಮಾಡುವುದು ಈಗ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ಸಲುವಾಗಿ ಸಿಸಿ ಕ್ಯಾಮರಾಗಳನ್ನು ಬಳಕೆ ಮಾಡಿದರೂ ಸಹ ಕಳ್ಳರು ಕ್ಯಾರೇ ಎನ್ನುತ್ತಿಲ್ಲ. ಗುಜರಾತ್ನ ಸೂರತ್ನಲ್ಲಿ ಮೊಬೈಲ್ ಕಳ್ಳತನದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ಬದಿಯಲ್ಲಿ ಮೊಬೈಲ್ ಬಳಸುತ್ತ ಯುವತಿ ಒಬ್ಬರು ನಿಂತಿರುತ್ತಾರೆ. ಆಕೆಯ ಕೈಯಲ್ಲಿದ್ದ ಮೊಬೈಲ್ನ್ನು ಕೇವಲ 5 ಸೆಕೆಂಡ್ನಲ್ಲಿ ಕದ್ದು ಖದೀಮರು ಪರಾರಿಯಾಗುತ್ತಾರೆ. ಕಪ್ಪು ಪಲ್ಸರ್ನಲ್ಲಿ ಬಂದ ಇಬ್ಬರು ಯುವಕರು ಸುಲಭವಾಗಿ ಕಳ್ಳತನ ಮಾಡುತ್ತಾರೆ. ಈ ವಿಡಿಯೋ ರಸ್ತೆ ಬದಿಯ ಅಂಗಡಿ ಅಥವಾ ಪೊಲೀಸರು ಅಳವಡಿಸಿದ ಸಿಸಿ ಕ್ಯಾಮರಾದ ರೀತಿ ಕಾಣುತ್ತಿದೆ. ಘಟನೆ ಸೂರತ್‌ನ ರಾಂಡರ್ ಪ್ರದೇಶದ್ದು ಎಂದು ಹೇಳಲಾಗ್ತಿದೆ. ಈ ಕುರಿತು ಪೊಲೀಸ ಏನು ಕ್ರಮ ಕೈಗೊಂಡಿದ್ದಾರೆ ಎಂಬುದರ ಮಾಹಿತಿ ತಿಳಿದುಬಂದಿಲ್ಲ.
ಇದನ್ನೂ ಓದಿ: ಚಿನ್ನಾಭರಣ ದೋಚಲು ಯತ್ನ; ದರೋಡೆಕೋರನ ಬೆರಳು ಕಚ್ಚಿ ಕತ್ತರಿಸಿದ ಮಹಿಳೆ!