ಗೋವಾದಲ್ಲಿ ಕಾಡ್ಗಿಚ್ಚು: ವಾಯುಸೇನೆ ವಿಮಾನದಲ್ಲಿ ಬೆಂಕಿ ನಂದಿಸುವ ಕಾರ್ಯ- ವಿಡಿಯೋ - ETV Bharat kannada News
🎬 Watch Now: Feature Video
ಗೋವಾ : ಇದು ಬೇಸಗೆಯ ಸಮಯ. ಬಿಸಿಲ ತಾಪಮಾನ ಎಲ್ಲಾ ಕಡೆ ಹೆಚ್ಚಾಗುತ್ತಿದೆ. ಅನೇಕ ಸವಾಲುಗಳನ್ನು ಪ್ರಾಣಿ, ಪಕ್ಷಿ ಸೇರಿದಂತೆ ಇಡೀ ಪರಿಸರವೇ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ನಡೆಸುವ ದುಷ್ಕೃತ್ಯಕ್ಕೆ ಅಪಾರ ಪ್ರಮಾಣದ ಅರಣ್ಯವಲಯ ನಾಶವಾಗುತ್ತಿದೆ. ಶನಿವಾರ ಗೋವಾದಲ್ಲಿ ಕಾಡ್ಗಿಚ್ಚುಪೀಡಿತ ಪ್ರದೇಶದಲ್ಲಿ ವಿಶಾಲ ಅರಣ್ಯ ಪ್ರದೇಶ ಸುಟ್ಟು ಕರಕಲಾಗಿದೆ. ಸಾಕಷ್ಟು ಪ್ರಾಣಿ, ಪಕ್ಷಿ ಮತ್ತು ಸಸ್ಯಸಂಕುಲವೂ ನಾಶವಾಗಿದೆ. ಬೆಂಕಿ ನಂದಿಸಲು ಭಾರತೀಯ ವಾಯುಪಡೆಯ (ಐಎಎಫ್) Mi-17 ಹೆಲಿಕಾಪ್ಟರ್ ಧಾವಿಸಿದ್ದು, ಕಾಡ್ಗಿಚ್ಚುಪೀಡಿತ ಪ್ರದೇಶಗಳಿಗೆ 25,000 ಲೀಟರ್‌ಗಿಂತಲೂ ಹೆಚ್ಚು ನೀರು ಹಾಯಿಸಿ ನಂದಿಸಿತು.
ಇನ್ನು ಚಿಕ್ಕಮಗಳೂರು ಜಿಲ್ಲೆಯ ಚುರ್ಚೆ ಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿಯೂ ಇತ್ತೀಚೆಗೆ ಕಾಡ್ಗಿಚ್ಚು ಸಂಭವಿಸಿ ನೂರಾರು ಎಕರೆ ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿತ್ತು. ಹಲವಾರು ಗಿಡ, ಮರಗಳು ಸುಟ್ಟು ಕರಕಲಾಗಿದ್ದವು. ಅಲ್ಲದೇ ಘಟನೆಯಲ್ಲಿ ಪ್ರಾಣಿ, ಪಕ್ಷಿಗಳು ಕೂಡಾ ಸಾವನ್ನಪ್ಪಿರುವ ಶಂಕೆ ಇದೆ. ಈ ವಿಷಯ ತಿಳಿಯುತ್ತಿದಂತೆಯೇ ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದರು.
ಇದನ್ನೂ ಓದಿ: ಕಡಬದಲ್ಲಿ ಕಾಡುತ್ತಿದೆ ಕಾಡ್ಗಿಚ್ಚು.. ವನ್ಯ ಪ್ರಾಣಿಗಳ ಪರದಾಟ