ನನಗೆ ಸಚಿವ ಸ್ಥಾನ ಬೇಡ : ಶಾಸಕ ದುರ್ಯೋಧನ ಐಹೊಳೆ - ETv Bharat Kannada News
🎬 Watch Now: Feature Video
ಚಿಕ್ಕೋಡಿ (ಬೆಳಗಾವಿ): ನನಗೆ ಯಾವುದೇ ಸಚಿವ ಸ್ಥಾನ ಮಾನ ಬೇಡ, ಇನ್ನೇನು ಮೂರು ತಿಂಗಳು ಮಾತ್ರ ಉಳಿದಿದೆ. ಹೀಗಾಗಿ ನನಗೆ ಸಚಿವ ಸ್ಥಾನ ಬೇಡ ಎಂದು ರಾಯಭಾಗ ಶಾಸಕ ದುರ್ಯೋಧನ ಐಹೊಳೆ ಹೇಳಿದ್ದಾರೆ. ಚಿಕ್ಕೋಡಿ ಪಟ್ಟಣದಲ್ಲಿ ನೂತನ ಪೊಲೀಸ್ ಠಾಣೆ ಉದ್ಘಾಟನೆ ವೇಳೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಸಚಿವ ಸ್ಥಾನಕ್ಕಿಂತ ನನ್ನ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮುಖ್ಯ. ಕರಗಾಂವ್ ಏತ ನೀರಾವರಿ ಯೋಜನೆ ಅನುಷ್ಠಾನಗೊಳಿಸುವುದೇ ಪ್ರಮುಖವಾಗಿದೆ. ಮುಂದಿನ ಬಾರಿ ನಮ್ಮದೇ ಪಕ್ಷ ಅಧಿಕಾರಕ್ಕೆ ಬಂದ್ರೆ ನೋಡೋಣ ಎಂದು ಶಾಸಕರು ಹೇಳಿದರು.
Last Updated : Feb 3, 2023, 8:38 PM IST