ಉಘೇ ಮಾದಪ್ಪ... 30 ದಿನದಲ್ಲಿ ಮಲೆ ಮಾದಪ್ಪನಿಗೆ ಕೋಟಿ-ಕೋಟಿ ಕಾಣಿಕೆ - ಚಾಮರಾಜನಗರ
🎬 Watch Now: Feature Video
ಚಾಮರಾಜನಗರ: ಕರ್ನಾಟಕದ ಪ್ರಮುಖ ದೇಗುಲಗಳಲ್ಲಿ ಒಂದಾದ ಚಾಮರಾಜನಗರದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು 2.28 ಕೋಟಿ ರೂ. ಸಂಗ್ರಹವಾಗಿದೆ. ಮಲೆಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಪೋಲಿಸ್ ಬಂದೋಬಸ್ತ್ನಲ್ಲಿ ನಡೆದ ಹುಂಡಿ ಎಣಿಕೆಯಲ್ಲಿ ಒಟ್ಟು 2.28,48,500 ರೂ. ಸಂಗ್ರಹವಾಗಿದೆ.
ಇದನ್ನೂ ಓದಿ: 36 ದಿನಗಳಲ್ಲೇ ಮಲೆಮಹದೇಶ್ವರನಿಗೆ ಹರಿದುಬಂತು ಕೋಟ್ಯಂತರ ಕಾಣಿಕೆ
ಕಳೆದ 30 ದಿನಗಳ ಅವಧಿಯಲ್ಲಿ ಇಷ್ಟು ಹಣ ಸಂಗ್ರಹವಾಗಿದೆ. ಅಮಾವಾಸ್ಯೆ ದಿನ, ಸರ್ಕಾರಿ ರಜಾ ದಿನಗಳಂದು ವಿವಿಧೆಡೆಯಿಂದ ಲಕ್ಷಾಂತರ ಜನರು ಆಗಮಿಸಿ ದೇವರ ದರ್ಶನ ಪಡೆದು ಮಾದಪ್ಪನಿಗೆ ಭರ್ಜರಿ ಕಾಣಿಕೆಯನ್ನೇ ಅರ್ಪಿಸಿದ್ದಾರೆ. ಜೊತೆಗೆ, 86 ಗ್ರಾಂ ಚಿನ್ನ ಹಾಗೂ 2.5 ಕೆಜಿ ಬೆಳ್ಳಿಯನ್ನು ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ್ದಾರೆ.
36 ದಿನಗಳಲ್ಲೇ 1.73 ಕೋಟಿ ರೂ. ಸಂಗ್ರಹ : ಕಳೆದ ಸೆಪ್ಟೆಂಬರ್ನಲ್ಲಿ ಕಾಣಿಕೆ ಎಣಿಕೆ ನಡೆದಿದ್ದು 36 ದಿನಗಳಲ್ಲೇ 1.73 ಕೋಟಿ ರೂ. ಸಂಗ್ರಹವಾಗಿತ್ತು. ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಎಡಿಸಿ ಆಗಿರುವ ಕಾತ್ಯಾಯಿನಿದೇವಿ ಮೇಲ್ವಿಚಾರಣೆಯಲ್ಲಿ ಹುಂಡಿ ಎಣಿಕೆ ನಡೆದಿತ್ತು.
ಇದನ್ನೂ ಓದಿ: ನಂಜುಂಡೇಶ್ವರನಿಗೆ 2.40 ಕೋಟಿ ರೂ. ಕಾಣಿಕೆ ನೀಡಿದ ಭಕ್ತರು
ಇದನ್ನೂ ಓದಿ: ದೇವಾಲಯದ ಹುಂಡಿ ಎಣಿಕೆ: ಇಷ್ಟಾರ್ಥ ಸಿದ್ಧಿಗಾಗಿ ನಾರಾಯಣನಿಗೆ ವಿಚಿತ್ರ ಪತ್ರಗಳು!