Uttarakhand rain disaster: ಗುಡ್ಡ, 3 ಅಂತಸ್ತಿನ ಹೋಟೆಲ್ ಕುಸಿತ.. ತಪಕೇಶ್ವರ ದೇವಸ್ಥಾನಕ್ಕೆ ನುಗಿದ್ದ ಪ್ರವಾಹದ ನೀರು - ರುದ್ರಪ್ರಯಾಗ
🎬 Watch Now: Feature Video
ಉತ್ತರಾಖಂಡ: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದ ಅಪಾರ ಹಾನಿಯಾಗಿದೆ. ರುದ್ರಪ್ರಯಾಗದಲ್ಲಿ ಮೂರು ಅಂತಸ್ತಿನ ಹೋಟೆಲ್ ಕುಸಿದಿದೆ. ಡೆಹ್ರಾಡೂನ್‌ನ ತಪಕೇಶ್ವರ ಮಹಾದೇವ ದೇವಸ್ಥಾನಕ್ಕೆ ಪ್ರವಾಹದ ನೀರು ನುಗ್ಗಿದೆ. ಮತ್ತೊಂದೆಡೆ ರಿಷಿಕೇಶ ಮತ್ತು ಹಲ್ದ್ವಾನಿಯಲ್ಲಿ ಇಬ್ಬರು ನದಿಯಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ವರದಿಯಾಗಿದೆ.
ಟನ್ಸ್ ನದಿಯ ಸಣ್ಣ ಉಪನದಿ ತಮ್ಸಾ ನದಿ ಉಕ್ಕಿ ಹರಿಯುತ್ತಿದ್ದು, ಡೆಹ್ರಾಡೂನ್‌ನ ಹೆಸರಾಂತ ತಪಕೇಶ್ವರ ಮಹಾದೇವ ದೇವಾಲಯದಲ್ಲಿ ನೀರು ನುಗ್ಗಿದ ದೃಶ್ಯ ಕಂಡು ಬಂತು. ಕಳೆದ ವರ್ಷವೂ ಭೀಕರ ಪ್ರವಾಹದೊಂದಿಗೆ ತಮ್ಸಾ ನದಿ ತಪಕೇಶ್ವರ ಮಹಾದೇವ ದೇವಸ್ಥಾನದ ಬಳಿಯ ಪಾದಚಾರಿ ಸೇತುವೆಯನ್ನು ಹಾನಿಗೊಳಿಸಿತ್ತು. ಡೆಹ್ರಾಡೂನ್‌ನ ವಿಕಾಸ್ ನಗರದಲ್ಲಿ ಸೋಮವಾರ ತಡರಾತ್ರಿ 15 ಮಂದಿ ಪ್ರವಾಹದಲ್ಲಿ ಸಿಲುಕಿದ್ದರು. ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸಿದೆ. ಮಲೆನಾಡಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.
ರಿಷಿಕೇಶ್ ಬದರಿನಾಥ್ ಎನ್‌ಎಚ್ ಬಂದ್: ರಿಷಿಕೇಶ-ಬದ್ರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ಇದೀಗ ತೋಟಾ ಕಣಿವೆ ಬಳಿ ನಿರ್ಬಂಧಿಸಲಾಗಿದೆ. ಇಲ್ಲಿ ಹೆದ್ದಾರಿಯ ಅರ್ಧ ಭಾಗ ಕುಸಿದಿದೆ. ಮತ್ತೊಂದೆಡೆ ಮಳೆ ನೀರಿನಲ್ಲಿ ತ್ಯಾಜ್ಯ ಬರುತ್ತಿರುವುದರಿಂದ ಸೋಮವಾರದಿಂದ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಸಂಚಾರ ಮಾರ್ಗ ಬದಲಾವಣೆ: ಭಾರಿ ಮಳೆಯಿಂದ ಋಷಿಕೇಶ-ಬದರಿನಾಥ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ದೇವಪ್ರಯಾಗದಿಂದ ಚಕ ಗಜ ಮತ್ತು ಮಲೆಠಾದಿಂದ ನರೇಂದ್ರನಗರಕ್ಕೆ ತಿರುಗಿಸಿ ಋಷಿಕೇಶಕ್ಕೆ ಕಳುಹಿಸಲಾಗುತ್ತಿದೆ. ಮತ್ತೊಂದೆಡೆ, ಮುನಿ ಕಿ ರೇಟಿಯಿಂದ ನರೇಂದ್ರ ನಗರದ ಮೂಲಕ ಶ್ರೀನಗರ, ದೇವಪ್ರಯಾಗ ಮತ್ತು ಪೌರಿಗೆ ಸಂಚಾರ ಮಾರ್ಗವನ್ನು ಬದಲಾಯಿಸಲಾಗುತ್ತಿದೆ. ಇನ್ನು ಕೌಡಿಯಾಲ ಬಳಿಯೂ ಋಷಿಕೇಶ ಬದರಿನಾಥ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಕೌಡಿಯಾಲ ಬಳಿ ಹಲವು ಪ್ರಯಾಣಿಕರು ಸಿಲುಕಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಸಂಚಾರಕ್ಕೆ ಮುಕ್ತವಾಗುವವರೆಗೆ ಜಿಲ್ಲಾಡಳಿತ ಸಂಚಾರ ಮಾರ್ಗ ಬದಲಿಸಿದೆ. ವಿಷಯ ತಿಳಿದ ಜಿಲ್ಲಾಧಿಕಾರಿ ಮಯೂರ್ ದೀಕ್ಷಿತ್, ಪ್ರಯಾಣಿಕರನ್ನು ಸಂಪರ್ಕಿಸಿ ಸಹಾಯ ಮಾಡುವಂತೆ ಕೀರ್ತಿನಗರ ಉಪವಿಭಾಗಾಧಿಕಾರಿ ಮತ್ತು ಪೊಲೀಸರಿಗೆ ತಕ್ಷಣ ಸೂಚನೆ ನೀಡಿದ್ದಾರೆ. ಎಲ್ಲ ಪ್ರಯಾಣಿಕರನ್ನು ಶ್ರೀನಗರ ತೆಹ್ರಿ ಚಂಬಾ ಮೂಲಕ ಋಷಿಕೇಶಕ್ಕೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ.
3 ಅಂತಸ್ತಿನ ಹೋಟೆಲ್ ಕುಸಿತ: ಕೇದಾರಘಾಟಿಯಲ್ಲಿ 30 ರಿಂದ 35 ಕೊಠಡಿಗಳ ಮೂರು ಅಂತಸ್ತಿನ ಹೋಟೆಲ್ ಕುಸಿದು ಅವಾಂತರ ಸೃಷ್ಟಿಸಿದೆ. ಇದಲ್ಲದೇ ಕೇದಾರಘಾಟಿಯ ಹಲವೆಡೆ ಹೆದ್ದಾರಿಯನ್ನೂ ಬಂದ್ ಮಾಡಲಾಗಿದೆ.
ಅಗಸ್ತ್ಯಮುನಿಯಲ್ಲಿ ಗುಡ್ಡ ಕುಸಿತ: ಗುಪ್ತಕಾಶಿಯ ದೇವಿಧರದ ಅಗಸ್ತ್ಯಮುನಿ ಪಟ್ಟಣದಲ್ಲಿ ಗುಡ್ಡ ಕುಸಿದೆ. ಗುಡ್ಡ ಕುಸಿದ ಪರಿಣಾಮ ಅಪಾರ ಪ್ರಮಾಣದ ಬಂಡೆಗಳು, ಅವಶೇಷಗಳು, ಮರಗಳು ಹೆದ್ದಾರಿಗೆ ಬಿದ್ದಿದೆ. ಇದಲ್ಲದೇ ಕೇದಾರಘಾಟಿಯ ಹೆದ್ದಾರಿಯಲ್ಲಿ ಹಲವು ಸ್ಥಳಗಳಲ್ಲಿ ಭೂಕುಸಿತ ಸಂಭವಿಸಿದೆ. ಹಾಗಾಗಿ ಸೋಮವಾರ ರಾತ್ರಿಯಿಂದ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣ ಬಂದ್ ಆಗಿದೆ.
ಇದನ್ನೂ ಓದಿ: ಮಳೆ ನೀರಿಗೆ ಕೊಚ್ಚಿ ಹೋಗಿದ್ದ ಸೇತುವೆ.. ರಸ್ತೆ ಇದೆ ಎಂದು ಭಾವಿಸಿ ದಾಟುವಾಗ ಪ್ರವಾಹಕ್ಕೆ ಸಿಲುಕಿ 8 ಮಂದಿ ಸಾವು