Watch... ರಸ್ತೆ ದಾಟುತ್ತಿದ್ದ ಬಾಲಕಿಯರಿಗೆ ಕಾರು ಡಿಕ್ಕಿ: ಅಪಘಾತದ ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ - Etv Bharat Kannada
🎬 Watch Now: Feature Video
ರೂರ್ಕಿ (ಉತ್ತರಾಖಂಡ): ವೇಗವಾಗಿ ಬಂದ ಕಾರೊಂದು ರಸ್ತೆ ದಾಟುತ್ತಿದ್ದ ಇಬ್ಬರು ಬಾಲಕಿಯರಿಗೆ ಡಿಕ್ಕಿ ಹೊಡೆದಿರುವ ಘಟನೆ ಇಲ್ಲಿಯ ಕೊತ್ವಾಲಿ ಪ್ರದೇಶದ ಮಂಡವಲಿ ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ 15 ವರ್ಷದ ಮತ್ತು 4 ವರ್ಷದ ಬಾಲಕಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಬಾಲಕಿಯರಿಬ್ಬರು ರಸ್ತೆ ದಾಟುತ್ತಿದ್ದ ವೇಳೆ ವೇಗಾವಾಗಿ ಬಂದ ಕಾರೊಂದು ಇಬ್ಬರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಹೊಡೆದ ರಭಸಕ್ಕೆ ಬಾಲಕಿಯರಿಬ್ಬರು ಮತ್ತೊಂದು ಬದಿಯ ರಸ್ತೆ ಮೇಲೆ ಬಿದ್ದಿದ್ದಾರೆ.
ಈ ವೇಳೆ ಅಲ್ಲಿಯೂ ವೇಗಾವಾಗಿ ಬಂದ ಕಾರುಗಳಿಗೆ ಬಾಲಿಕಿಯರು ಸಿಲುಕಿಕೊಂಡಿದ್ದು, ಓರ್ವ ಬಾಲಿಕಿಯನ್ನು ಸ್ವಲ್ಪ ದೂರದವರೆಗೆ ಕಾರು ಎಳೆದೊಯ್ದಿರುವುದು ದೃಶ್ಯದಲ್ಲಿ ಕಂಡು ಬಂದಿದೆ. ಅಪಘಾತದ ಬಳಿಕ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಿಷಯ ತಿಳಿದು ಪೊಲೀಸರು ಕೂಡಲೇ ಸ್ಥಳಕ್ಕಾಗಮಿಸಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿಯರಿಬ್ಬರಿಗೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಾಲಕಿಯರ ಸ್ಥಿತಿ ಗಂಭೀರವಾಗಿರುವುದನ್ನು ಕಂಡ ವೈದ್ಯರು ಹೈಯರ್ ಸೆಂಟರ್ ರಿಷಿಕೇಶ್ ಏಮ್ಸ್‌ಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಇನ್ನು ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಕಾರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಕೂದಲೆಳೆ ಅಂತರದಲ್ಲಿ ರೈಲು ಡಿಕ್ಕಿಯಿಂದ ಆನೆ ಪಾರು.. ವಿಡಿಯೋ