ಏಕಾಏಕಿ ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವ ಜಿ ಪರಮೇಶ್ವರ್: ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ದೂರುದಾರರಿಂದ ಮಾಹಿತಿ ಪಡೆದ ಸಚಿವರು - ಈಟಿವಿ ಭಾರತ ಕನ್ನಡ
🎬 Watch Now: Feature Video
ತುಮಕೂರು: ಗೃಹ ಸಚಿವ ಜಿ ಪರಮೇಶ್ವರ್, ಇಂದು ಪಾವಗಡ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ದೂರುದಾರರಿಗೆ ಕರೆ ಮಾಡುವ ಮೂಲಕ ಪೊಲೀಸ್ ಠಾಣೆಯಲ್ಲಿನ ಅಧಿಕಾರಿಗಳ ಮತ್ತು ಸಿಬ್ಬಂದಿ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸಚಿವರ ಭೇಟಿಯಿಂದ ಸ್ವತಃ ಪೊಲೀಸ್ ಸಿಬ್ಬಂದಿಗಳು ಗಲಿಬಿಲಿಗೊಂಡರು.
ಪಾವಗಡ ಪೊಲೀಸ್ ಠಾಣೆಗೆ ಏಕಾಏಕಿ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ ಠಾಣೆಯಲ್ಲಿದ್ದ ವಿಸೀಟರ್ ಪುಸ್ತಕ ತೆಗೆದು ನೇರವಾಗಿ ದೂರುದಾರನಿಗೆ ಕರೆ ಮಾಡಿದ್ದಾರೆ. ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಪೊಲೀಸ್ ಠಾಣೆಗೆ ಬಂದು ವ್ಯಕ್ತಿಯೊಬ್ಬರು ದೂರು ಕೊಟ್ಟಿದ್ದರು. ಪುಸ್ತಕದಲ್ಲಿದ್ದ ಅವರ ಮೊಬೈಲ್ ನಂಬರ್ ಅನ್ನು ಪರಿಶೀಲಿಸಿದ ಸಚಿವ ಪರಮೇಶ್ವರ್ ಅವರು ನೇರವಾಗಿ ದೂರುದಾರನಿಗೆ ಕರೆ ಮಾಡಿ ಪೊಲೀಸರು ಸ್ಪಂದಿಸಿದ ರೀತಿ ಬಗ್ಗೆ ಮಾಹಿತಿ ಪಡೆದರು.
ಪಾವಗಡ ತಿರುಮಣಿ ಸೋಲಾರ್ ಪಾರ್ಕ್ಗೆ ಭೇಟಿ ನೀಡಿದ್ದ ಗೃಹ ಸಚಿವರು ಬಳಿಕ ಪಾವಗಡ ಪೊಲೀಸ್ ಠಾಣೆಗೆ ಏಕಾಏಕಿ ಭೇಟಿ ನೀಡಿದ್ದರು.
ಇದೇ ವೇಳೆ, ಪಾವಗಡ ಪೊಲೀಸ್ ಠಾಣೆಯ ಕಟ್ಟಡ ಸ್ಥಿತಿ ಪರಿಶೀಲನೆ ನಡೆಸಿದರು. ಈ ವೇಳೆ, ಪೊಲೀಸರ ಕಾರ್ಯವೈಖರಿಯನ್ನು ಕೂಡ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಪರಮೇಶ್ವರ್ಗೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್ ಮಾಹಿತಿ ನೀಡಿದರು.
ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್: ಶೀಘ್ರದಲ್ಲೇ ಹಾಲಿನ ದರ ಹೆಚ್ಚಳ?