ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ದಿನ ವಿಘ್ಞಗಳು ಆಗದಂತೆ ಬೆಣ್ಣೆನಗರಿಯಲ್ಲಿ ಹೋಮ: ರಾಮತಾರಕ ಮಂತ್ರ ಜಪ
🎬 Watch Now: Feature Video
Published : Jan 17, 2024, 4:37 PM IST
ದಾವಣಗೆರೆ: ಅಯ್ಯೋಧ್ಯಾ ಶ್ರೀರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ರಾಮಮಂತ್ರ ಜಪ ಹೋಮ ನಡೆಸಲಾಗುತ್ತಿದೆ. ಅಯ್ಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆ ದಿನ ಯಾವುದೇ ತೊಂದರೆ ತೊಡಕು ವಿಘ್ಞಗಳು ಆಗಬಾರದು ಎಂಬ ದೃಷ್ಟಿಯಿಂದ ಈ ಹೋಮ ನಡೆಸಲಾಗುತ್ತಿದೆ ಎಂದು ರಾಘವೇಂದ್ರ ಮಠದ ಪುರೋಹಿತರು ಮಾಹಿತಿ ನೀಡಿದ್ದಾರೆ.
ಇಂದು ಒಂದೇ ದಿನ ಒಂದು ಲಕ್ಷ ರಾಮತಾರಕ ಮಂತ್ರ ಜಪ ಮಾಡಲಾಗಿದೆ, 40ಕ್ಕೂ ಅಧಿಕ ಪುರೋಹಿತರು ಈ ಹೋಮದಲ್ಲಿ ಭಾಗಿಯಾಗಿ ಏಕಕಾಲಕ್ಕೆ ಮಂತ್ರ ಜಪಿಸಿದರು. ಇದಲ್ಲದೇ ಈ ಹೋಮ ಹವನ ಹಾಗೂ ಮಂತ್ರ ಜಪ ಜನವರಿ 22ಕ್ಕೆ ರಾಮ ಮಂದಿರ ಉದ್ಘಾಟನೆ ಆಗೋವರೆಗೂ ಮುಂದುವರೆಯಲಿದೆ. ಇನ್ನು ರಾಮ ಮಂದಿರ ಉದ್ಘಾಟನೆ ಆಗೋವರೆಗೂ ಒಂದು ಕೋಟಿ ರಾಮತಾರಕ ಮಂತ್ರ ಜಪ ಕೂಡ ಮಾಡಲಾಗುವುದು ಎಂದು ಪುರೋಹಿತರು ಮಾಹಿತಿ ನೀಡಿದ್ದಾರೆ. ಇಂದು ಕೂಡ ಹೋಮ ಹಾಗೂ ರಾಮತಾರಕ ಮಂತ್ರ ಜಪ ಮಾಡುವ ಮೂಲಕ ಪ್ರಾರ್ಥನೆ ಸಲ್ಲಿಸಲಾಯಿತು.
ಇದನ್ನೂ ಓದಿ: ಪ್ರಾಯಶ್ಚಿತ್ತ, ಕರ್ಮಕುಟಿ ಪೂಜೆಯೊಂದಿಗೆ ರಾಮಲಲ್ಲಾ ಪಟ್ಟಾಭಿಷೇಕದ ವಿಧಿವಿಧಾನ ಆರಂಭ