ಶಿವಮೊಗ್ಗದಲ್ಲಿ ಹೋಳಿ ಆಚರಣೆ; ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್.. ಬಣ್ಣದಲ್ಲಿ ಮಿಂದೆದ್ದ ಯುವಕ, ಯುವತಿಯರು
🎬 Watch Now: Feature Video
ಶಿವಮೊಗ್ಗ: ದೇಶಾದ್ಯಂತ ರಂಗು ರಂಗಿನ ಹೋಳಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅದರಂತೆ ಶಿವಮೊಗ್ಗ ನಗರದಲ್ಲೂ ಸಹ ಇದೇ ಮೊದಲ ಬಾರಿಗೆ ಹಿಂದೂ ಅಲಂಕಾರ ಸಮಿತಿ ವತಿಯಿಂದ ನಗರದ ಗೋಪಿ ವೃತ್ತದಲ್ಲಿ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಯೋಜಿಸಿಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಬಣ್ಣದಲ್ಲಿ ಮಿಂದೆದ್ದರು.
ಇದೇ ಮೊದಲ ಬಾರಿಗೆ ನಗರದ ಗೋಪಿ ಸರ್ಕಲ್ನಲ್ಲಿ ಹೋಳಿ ಹಬ್ಬದ ಆಚರಣೆಗಾಗಿ ಡಿಜೆ ವ್ಯವಸ್ಥೆ ಮಾಡಿ ಅದ್ಧೂರಿಯಾಗಿ ಬಣ್ಣದ ಹಬ್ಬವನ್ನು ಆಚರಿಸಲಾಗಿದೆ. ಸಾವಿರಕ್ಕೂ ಹೆಚ್ಚು ಜನ ಯುವಕ, ಯುವತಿಯರು ಚಲನಚಿತ್ರದ ಹಾಡುಗಳಿಗೆ ಕುಣಿದು ಸಂಭ್ರಮಿಸಿದರು. ಪ್ರತಿವರ್ಷ ಕೇವಲ ಬಣ್ಣಗಳನ್ನು ಎರಚುವ ಮೂಲಕ ಹೋಳಿ ಆಚರಿಸಲಾಗುತ್ತಿತ್ತು. ಆದರೆ ಈ ಬಾರಿ ವಿಶೇಷವಾಗಿ ಹಾಗೂ ವ್ಯವಸ್ಥಿತವಾಗಿ ಗೋಪಿ ವೃತ್ತದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಡಿಜೆ ಡ್ಯಾನ್ಸ್ ಮೂಲಕ ಹೋಳಿ ಹಬ್ಬ ಆಚರಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅದರಂತೆ ಶಿವಮೊಗ್ಗ ನಗರದ ಸಾವಿರಾರು ಜನ ಯುವಕ, ಯುವತಿಯರು ರಂಗಿನ ಆಟ ಆಡಿ ಖುಷಿಪಟ್ಟರು.
ಇದನ್ನೂ ಓದಿ: ಶಿವಮೊಗ್ಗದ ವಿವಿಧೆಡೆ ಶಂಕಿತ ಉಗ್ರ ಶಾರಿಕ್ ಕರೆದೊಯ್ದು ಸ್ಥಳ ಮಹಜರು ನಡೆಸಿದ ಎನ್ಐಎ