ಹಿಟ್​ ಅಂಡ್​​ ರನ್​: ನೋಡು-ನೋಡುತ್ತಿದ್ದಂತೆ ವ್ಯಕ್ತಿಗೆ ಗುದ್ದಿ ಕಾರಿನ ಸಮೇತ ಪರಾರಿಯಾದ ಚಾಲಕ! - ಜಬಲ್ಪುರದಲ್ಲಿ ವ್ಯಕ್ತಿಯ ಮೇಲೆ ಹರಿದ ಕಾರು

🎬 Watch Now: Feature Video

thumbnail

By

Published : Jun 20, 2022, 8:55 AM IST

Updated : Feb 3, 2023, 8:24 PM IST

ಮಧ್ಯಪ್ರದೇಶದ ಜಬಲ್ಪುರದಲ್ಲಿ ಹಿಟ್ ಅಂಡ್ ರನ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಕಾರು ಚಾಲಕ ಡಿಕ್ಕಿ ಹೊಡೆದಿದ್ದಲ್ಲದೇ ಆತನ ಮೇಲೆಯೇ ಹರಿಸಿದ್ದಾನೆ. ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಈ ಘಟನೆ ಗೋರಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು 45 ವರ್ಷದ ಸಂತೋಷ್ ಠಾಕೂರ್ ಎಂದು ಗುರುತಿಸಲಾಗಿದೆ. ಆಶ್ಚರ್ಯವೆಂದರೆ ವ್ಯಕ್ತಿಗೆ ಬಲವಾಗಿ ಹೊಡೆದರೂ ಕಾರು ಚಾಲಕ ನಿಲ್ಲಿಸಲಿಲ್ಲ. ಜನರು ಕಾರನ್ನು ಹಿಂಬಾಲಿಸಿದರೂ ಚಾಲಕ ಕಾರು ಸಮೇತ ಪರಾರಿಯಾಗಿದ್ದಾನೆ. ಈ ಘಟನೆಯ ಸಿಸಿಟಿವಿ ವಿಡಿಯೋದಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Last Updated : Feb 3, 2023, 8:24 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.