ಹಿಂದೂ ಮಹಾಮಂಡಲ ಗಣಪತಿ ನಿಮಜ್ಜನ.. ಮೊಳಗಿತು ಸಾವರ್ಕರ್ ಪರ ಘೋಷಣೆ - ಗಣಪತಿ ರಾಜಬೀದಿ ಉತ್ಸವ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16331036-thumbnail-3x2-swse.jpg)
ಹಿಂದೂ ಸಂಘಟನಾ ಮಹಾಮಂಡಲ ಗಣಪತಿ ರಾಜಬೀದಿ ಉತ್ಸವ ಶಾಂತಿಯುತವಾಗಿ ಸಾಗಿತು. ಬೆಳಗ್ಗೆ ಕೋಟೆಯ ಭೀಮೇಶ್ವರ ದೇವಾಲಯದಿಂದ ಹೊರಟ ರಾಜಬೀದಿ ಉತ್ಸವವು ಗಾಂಧಿ ಬಜಾರ್ನ ಜಾಮೀಯ ಮಸೀದಿಗೆ ಬರುವಷ್ಟರಲ್ಲಿ ಸಂಜೆ 5 ಗಂಟೆಯಾಗಿತ್ತು. ಮರವಣಿಗೆಯಲ್ಲಿ ಯುವಕರು- ಯುವತಿಯರು, ಮಹಿಳೆಯರು ಮಕ್ಕಳು ಎಲ್ಲರೂ ಕೇಸರಿಶಾಲು, ಪೇಟ ಧರಿಸಿ, ಕುಣಿದು ಕುಪ್ಪಳಿಸಿದರು. ಮೆರವಣಿಗೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಪುತ್ರ ಕಾಂತೇಶ್ ಮತ್ತ ಮೊಮ್ಮಗ ವಿವನ್ ಜೊತೆ ಆಗಮಿಸಿದರು. ನಂತರ ಸಂಸದ ರಾಘವೇಂದ್ರ ಸ್ಥಳಕ್ಕೆ ಬಂದು ಗಣಪತಿಗೆ ಪೂಜೆ ಸಲ್ಲಿಸಿದರಲ್ಲದೆ, ಡಿಜೆ ಹಾಡಿಗೆ ಕುಣಿದು ಗಮನ ಸೆಳೆದರು. ಮಸೀದಿ ಮುಂಭಾಗ ಗಣಪತಿ ಆಗಮಿಸಿದಾಗ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಆಗಮಿಸಿ ಟ್ರ್ಯಾಕ್ಟರ್ ಏರಿದರು. ನಂತರ ಗಣಪತಿ ಮೆರವಣಿಗೆಯು ಅಮೀರ್ ಅಹಮದ್ ವೃತ್ತಕ್ಕೆ ಆಗಮಿಸಿದಾಗ ಜನಸಾಗರವೇ ಹರಿದು ಬಂದಿತ್ತು. ಇಲ್ಲಿ ಶಿವಾಜಿ ಪುತ್ಥಳಿಗೆ ಹಾರ ಹಾಕಿ ಮುಂದೆ ಸಾಗಲಾಯಿತು. ಭಜನೆಗೆ ಎಲ್ಲರೂ ಕುಣಿದು ಕುಪ್ಪಳಿಸಿದರು. ಬಳಿಕ ಗಣೇಶನ ನಿಮಜ್ಜನವನ್ನು ಮಾಡಲಾಯಿತು.
Last Updated : Feb 3, 2023, 8:27 PM IST