ಚುನಾವಣೆಯಲ್ಲಿ ಗೆಲುವು, ತಮಿಳುನಾಡಿನಲ್ಲಿ ನಿಕುಂಬಲ ಯಜ್ಞ ನೆರವೇರಿಸಿ ಹರಕೆ ತೀರಿಸಿದ ಹಿಮಾಚಲ ಡಿಸಿಎಂ ಅಗ್ನಿಹೋತ್ರಿ - ಈಟಿವಿ ಭಾರತ
🎬 Watch Now: Feature Video
ತಂಜಾವೂರು(ತಮಿಳುನಾಡು): ಚುನಾವಣೆ ಗೆಲುವು ಸಾಧಿಸಿದ ಹಿನ್ನೆಲೆ ಹಿಮಾಚಲ ಪ್ರದೇಶದ ಡಿಸಿಎಂ ಮುಖೇಶ್ ಅಗ್ನಿಹೋತ್ರಿ ಅವರು,ಪತ್ನಿ,ಪುತ್ರರೊಂದಿಗೆ ಸೇರಿಕೊಂಡು ಕುಂಭಕೋಣಂ ಬಳಿ ಕಾಳಿಮಾತೆ ದೇಗುಲದ ಹತ್ತಿರದ ಅಯ್ಯವಾಡಿ ಪ್ರತಿಯಂಗಿರಾ ದೇವಿ ದೇವಸ್ಥಾನದಲ್ಲಿ ನಿಕುಂಬಲ ಯಜ್ಞ ನೆರವೇರಿಸಿದರು.
ಹಿಂದಿನ ನವೆಂಬರ್‌ನಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಚುನಾವಣೆಯಲ್ಲಿ ಗೆದ್ದರೆ ನಿಕುಂಬಲ ಯಜ್ಞ ಮಾಡಿಸುವುದಾಗಿ ಬೇಡಿಕೊಂಡಿದ್ದರು. ಗೆದ್ದು ಡಿಸಿಎಂ ಸ್ಥಾನ ಅಲಂಕರಿಸಿರುವ ಮುಖೇಶ್ ಅವರು ಕುಟುಂಬ ಸಮೇತ ಸೋಮವಾರ ಅಯ್ಯವಾಡಿಗೆ ಬಂದು ಪ್ರತ್ಯಂಗಿರಾ ದೇವಿ ದೇಗುಲದ ಎದುರು ಅಗ್ನಿಕುಂಡದಲ್ಲಿ ನಿಕುಂಬಲ ಯಜ್ಞವನ್ನು ಪೂರ್ಣಗೊಳಿಸಿದರು.
ಝಡ್ಪ್ಲಸ್ ಭದ್ರತೆ ಇರುವ ಹಿನ್ನೆಲೆ ಛಾಯಾಚಿತ್ರ ,ರೆಕಾರ್ಡ್ ಮಾಡಲು ಮಾಧ್ಯಮ ವರದಿಗಾರರಿಗೆ ಅನುಮತಿ ನಿರಾಕರಿಸಲಾಯಿತು. ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದರು. ಈಟಿವಿ ಭಾರತ ಜತೆಗೆ ದೇವಸ್ಥಾನದ ಗುರು ಶಂಕರ್ ಅವರು ಮಾತನಾಡಿ, ನಿಕುಂಬಲ ಯಜ್ಞದಿಂದ ಕಳೆದುಹೋದ ರಾಜಕೀಯ ಸ್ಥಾನಮಾನ ಮರಳಿ ಬರುತ್ತದೆ ಎಂಬ ನಂಬಿಕೆ ಇದೆ. ಅಧಿಕಾರ ಕಳೆದುಕೊಂಡು ವನವಾಸಕ್ಕೆ ತೆರಳಿದ್ದ ಪಾಂಡವರು ಈ ದೇವಸ್ಥಾನಕ್ಕೆ ಭೇಟಿ ನೀಡಿ ನಿಕುಂಬಲ ಯಜ್ಞ ನೆರವೇರಿಸಿದ ಬಳಿಕ ರಾಜ್ಯ ಮರಳಿ ಸಿಕ್ಕಿತು ಎಂಬ ಪ್ರತೀತಿಯೂ ಇದೆ.
ಇದನ್ನೂಓದಿ:ಪ್ರೇಮಿಗಳ ದಿನ: ಹಸಿರೇ ಉಸಿರು.. ಮರಗಳ ಮೇಲಿನ ಪ್ರೀತಿಗಾಗಿ ಏಕಾಂಗಿಯಾಗಿ ಉಳಿದ ಗಜೇಂದ್ರ ಯಾದವ್