ಹೊಗೆನಕಲ್ ಬಳಿ ಕಾವೇರಿ ನೀರಿನಲ್ಲಿ ರಿಲ್ಯಾಕ್ಸ್ ಮೂಡಿಗೆ​ ಜಾರಿದ ಆನೆಗಳ ಹಿಂಡು - ಹೊಗೆನಕಲ್ ಜಲಪಾತ

🎬 Watch Now: Feature Video

thumbnail

By ETV Bharat Karnataka Team

Published : Nov 21, 2023, 4:37 PM IST

ಚಾಮರಾಜನಗರ: ಬರೋಬ್ಬರಿ 19ಕ್ಕೂ ಹೆಚ್ಚು ಆನೆಗಳು ಇರುವ ಹಿಂಡು ಕಾವೇರಿ ನದಿಯನ್ನು ದಾಟಿ ಹನೂರು ತಾಲೂಕಿನ ಗಡಿ ಹೊಗೆನಕಲ್​​ ಪ್ರದೇಶಕ್ಕೆ ಬಂದಿದ್ದು, ಇವುಗಳನ್ನು ಯುವಕನೋರ್ವ ಸೆರೆ ಹಿಡಿದಿದ್ದಾನೆ. ಅದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್​ ಆಗುತ್ತಿದೆ. ಆನೆಗಳ ಚಲನವಲನದ ವಿಡಿಯೋವನ್ನು ಹೊಗೆನಕಲ್​ನ ನಿವಾಸಿ ಗೋಪಿನಾಥಂ ಎಂಬ ಯುವಕ ಸೆರೆ ಹಿಡಿದಿದ್ದು, ಅದನ್ನು ಜಾಲತಾಣಕ್ಕೆ ಹರಿಬಿಟ್ಟಿದ್ದಾನೆ.

19 ಆನೆಗಳ ಹಿಂಡು ಠಿಕಾಣಿ: ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದ ವ್ಯಾಪ್ತಿ ಹನೂರು ತಾಲೂಕಿನ ಗಡಿಯಲ್ಲಿ ಹೊಗೆನಕಲ್ ಜಲಪಾತದ ಬಳಿ 3 ಮರಿ ಸೇರಿದಂತೆ 19ಕ್ಕೂ ಹೆಚ್ಚು ಆನೆಗಳ ಹಿಂಡು ಠಿಕಾಣಿ ಹೂಡಿದ್ದು, ನದಿಯಲ್ಲಿ ನೀರನ್ನು ಮೈಮೇಲೆ ಎರಚಿಕೊಕೊಳ್ಳುತ್ತ ಮರಿಗಳೊಂದಿಗೆ ರಿಲ್ಯಾಕ್ಸ್ ಮೂಡಿನಲ್ಲಿರುವಂತೆ ಕಂಡುಬಂದಿವೆ. 

ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ನೀರಿನ ಕೊರತೆ ಇರುವುದರಿಂದ ಆನೆಗಳು ಹೊರಗೆ ಬಂದಿರಬಹುದು ಎನ್ನಲಾಗ್ತಿದೆ. ಸದ್ಯ ಈ ಆನೆಗಳ ಗುಂಪು ಕಾವೇರಿ ನದಿ ದಂಡೆ ಸಮೀಪ ಹೊಗೆನಕಲ್ ಜಲಪಾತದ ಬಳಿ ಮೇವು ತಿನ್ನುತ್ತ ಅತ್ತಿಂದಿತ್ತ ಓಡಾಡುತ್ತಿವೆ. ದಣಿವು ಆದಾಗ ಹಿಂಡು ಹಿಂಡಾಗಿ ನೀರಿಗಿಳಿಯುತ್ತವೆ.  

ಇದನ್ನೂ ಓದಿ:ಚಿಕ್ಕಮಗಳೂರು: ಕಬ್ಬಿನ ಗದ್ದೆಯಲ್ಲಿ ಆನೆಗಳು; ಅರಣ್ಯ ಇಲಾಖೆ ವಿರುದ್ಧ ಜನರ ಆಕ್ರೋಶ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.