ಮದುವೆ ನಂತರ ಮಹಿಳೆಯರ ವೃತ್ತಿ ಜೀವನದ ಬಗ್ಗೆ ಹೇಮಾ ಮಾಲಿನಿ ಹೇಳಿದ್ದೇನು? - ಹೇಮಾ ಮಾಲಿನಿ

🎬 Watch Now: Feature Video

thumbnail

By

Published : Mar 15, 2023, 8:43 AM IST

ಸುಂದರ ವದನೆ, ಸದಾ ಹಸನ್ಮುಖಿ ಹಾಗು ಖ್ಯಾತ ಬಾಲಿವುಡ್​ ನಟಿ ಹೇಮಾ ಮಾಲಿನಿ ಕೋಟಿ ಕೋಟಿ ಮೌಲ್ಯದ ಆಸ್ತಿಯ ಒಡತಿ. ವಿಭಿನ್ನ ಶೈಲಿಯ ನಟನೆಯಿಂದಾಗಿ ಇಂದಿಗೂ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಚಿತ್ರಲೋಕದ 'ಕನಸಿನ ಕನ್ಯೆ'ಯಾಗಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ ಸೈ ಎನಿಸಿಕೊಂಡವರು. ಇದೀಗ ಇವರು ಚಿತ್ರರಂಗ ಮಾತ್ರವಲ್ಲದೇ, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ.

ಮಂಗಳವಾರ ಮಾಧ್ಯಮವೊಂದು ನಡೆಸಿದ ಸಂದರ್ಶನದಲ್ಲಿ ಮದುವೆಯ ನಂತರದ ಮಹಿಳೆಯರ ವೃತ್ತಿ ಜೀವನದ ಕುರಿತು ಮಾತನಾಡುತ್ತಾ, "ನಾನು ಮದುವೆಯಾಗಿದ್ದೇನೆ. ಹಾಗಂತ ನನ್ನ ಕೆಲಸವನ್ನು ಎಂದಿಗೂ ನಿಲ್ಲಿಸುವುದಿಲ್ಲ, ಖಂಡಿತ ಮುಂದುವರೆಸುತ್ತೇನೆ. ಬಹುಶಃ ಜನರು ನಾನು ಹೇಗೆಂದು ಈಗಾಗಲೇ ನೋಡಿದ್ದಾರೆ, ಇನ್ನೂ ಕೆಲವರು ನನ್ನನ್ನು ಅನುಸರಿಸುತ್ತಿದ್ದಾರೆ. ನಾವು ಇತರರಿಗೆ ಮಾದರಿಯಾಗಿರಬೇಕು. ವಿವಾಹವಾದ ಬಳಿಕ ಪತ್ನಿ ಕೆಲಸ ಮಾಡುತ್ತೇನೆಂದರೆ ಪತಿಯಾದವನು ಆಕೆಯ ಟ್ಯಾಲೆಂಟ್​ ಅರ್ಥ ಮಾಡಿಕೊಂಡು ಆಕೆಗೆ ಬೆನ್ನೆಲುಬಾಗಿ ನಿಲ್ಲಬೇಕು" ಎನ್ನುವ ಮೂಲಕ ಮದುವೆಯ ನಂತರವೂ ಮಹಿಳೆಯರು ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಸ್ವಾತಂತ್ರ್ಯವಾಗಿ ಇರಬೇಕು ಎಂಬ ಸಲಹೆ ನೀಡಿದರು.  

ಇದನ್ನೂ ಓದಿ: ಶಾಲೆಯಲ್ಲಿ ಡ್ರೆಸ್​​ ಕೋಡ್​ ಅನುಸರಿಸಬೇಕು.. ಹಿಜಾಬ್​ ತೀರ್ಪಿನ ಬಗ್ಗೆ ಹೇಮಾ ಮಾಲಿನಿ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.