ಧಾರವಾಡದಲ್ಲಿ ಧಾರಾಕಾರ ಮಳೆ: ಕೇಂದ್ರ ಸಚಿವರು ಭಾಗವಹಿಸಲಿದ್ದ ಕಾರ್ಯಕ್ರಮ ವೇದಿಕೆ ಕುಸಿತ - ಕೇಂದ್ರ ರೈಲ್ವೆ ಸಚಿವರ ವೇದಿಕೆ ಕುಸಿತ
🎬 Watch Now: Feature Video
ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ ಧಾರವಾಡ ತತ್ತರಿಸಿದೆ. ಜೊತೆಗೆ ನಗರದಲ್ಲಿ ಇಂದು ನಡೆಯಲಿರುವ ರೈಲ್ವೆ ಸಚಿವರ ಕಾರ್ಯಕ್ರಮದ ವೇದಿಕೆ ಕೂಡ ಮಳೆಗೆ ನೆಲಕಚ್ಚಿದೆ. ನವೀಕರಣಗೊಂಡ ನಗರ ರೈಲ್ವೆ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕಾಗಿ ನಿಲ್ದಾಣದ ಪಕ್ಕದಲ್ಲಿ ಹಾಕಿದ್ದ ವೇದಿಕೆ ಹಾಗೂ ಸುಮಾರು 300 ಜನರಿಗೆ ಹಾಕಿದ್ದ ಶಾಮಿಯಾನ್ ಸಂಪೂರ್ಣವಾಗಿ ಕುಸಿದಿದೆ. ಈ ಹಿನ್ನೆಲೆ ಕಾರ್ಯಕ್ರಮದ ವೇದಿಕೆಯನ್ನು ರೈಲು ನಿಲ್ದಾಣದ ಒಳಗಡೆ ಸ್ಥಳಾಂತರಿಸಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
Last Updated : Feb 3, 2023, 8:29 PM IST