ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ, ಅನ್ನದಾತನ ಚಿಂತೆ ದೂರ- ವಿಡಿಯೋ
🎬 Watch Now: Feature Video
Published : Sep 1, 2023, 9:25 PM IST
ಚಿಕ್ಕಮಗಳೂರು: ನಗರದಲ್ಲಿಂದು ಒಂದು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆ ಸುರಿಯಿತು. ನಿನ್ನೆ (ಗುರುವಾರ) ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿತ್ತು. ಇಂದು ನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಗುಡುಗುಸಹಿತ ಮಳೆಯಾಗಿದೆ.
ನಗರ ಪ್ರದೇಶದಲ್ಲಿ ಜನಜೀವನ ಅಸ್ತವ್ಯಸ್ತವಾಯಿತು. ಸಂಚಾರ ವ್ಯವಸ್ಥೆಗೂ ಅಡಚಣೆಯಾಯಿತು. ಹಲವು ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ವಸ್ತಾರೆ, ಮೂಗುತಿ ಹಳ್ಳಿ, ಮೂಡಿಗೆರೆ ರಸ್ತೆ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಧಾರಕಾರ ಮಳೆಯಾಗಿದೆ.
ವರ್ಷಧಾರೆ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತು. ಕಳೆದೊಂದು ತಿಂಗಳಿನಿಂದ ರೈತರಿಗೆ ದಾರಿ ತೋಚದಂತಾಗಿತ್ತು. ಮಳೆ ನಂಬಿ ಭೂಮಿಯಲ್ಲಿ ಬಿತ್ತನೆ ಮಾಡಿದ್ದ ಆಲೂಗಡ್ಡೆ, ಬೀನ್ಸ್, ಬಟಾಣಿ, ಶುಂಠಿ ಎಲ್ಲವೂ ಭೂಮಿಯಲ್ಲಿ ಕರಗಿ ಮಣ್ಣುಪಾಲಾಗುತ್ತಿತ್ತು. ಬಿಸಿಲ ತಾಪಕ್ಕೆ ಭೂಮಿ ಬಿರುಕು ಬಿಟ್ಟು ಒಣಗಿ ಹೋಗಿತ್ತು. ಮತ್ತೊಂದೆಡೆ, ನಿಗದಿತ ಪ್ರಮಾಣದಲ್ಲಿ ಮಳೆ ಬಾರದೇ ಕೆರೆ, ಕಟ್ಟೆಗಳು ಖಾಲಿಯಾಗಿ ಒಣಗಿ ಹೋಗುತ್ತಿದ್ದವು. ಈ ದೃಶ್ಯಗಳನ್ನು ನೋಡಿದ ರೈತರು ನಿಜಕ್ಕೂ ಕಂಗಲಾಗಿದ್ದರು.
ಇದನ್ನೂ ಓದಿ : ನಾಳೆಯಿಂದ ರಾಜ್ಯದಲ್ಲಿ ಭಾರಿ ಮಳೆ: ದಕ್ಷಿಣ ಒಳನಾಡಿನ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ