ಡಿ.ಕೆ ಶಿವಕುಮಾರ್ ಶ್ಲಾಘಿಸಿದ ಸುಧಾಕರ್: ಸಚಿವರಿಂದ ಡಿ.ಕೆ ಬ್ರದರ್ಸ್ ಗುಣಗಾನ - etv bharat kannada
🎬 Watch Now: Feature Video
ರಾಮನಗರ: "ಡಿ.ಕೆ ಶಿವಕುಮಾರ್ ಅವರ ಗೆಲುವಿನ ಅಂತರವನ್ನು ನಾನು ಸೂಕ್ಷವಾಗಿ ಗಮನಿಸುತ್ತಿದ್ದೇನೆ. ಮೊದಲು ಕಡಿಮೆ ಮಾರ್ಜಿನ್ನಲ್ಲಿ ಗೆಲ್ತಾ ಇದ್ರು, ಬರಬರುತ್ತಾ 75 ಸಾವಿರ ಲೀಡ್ಗೆ ಹೋಯ್ತು. ಡಿಕೆಶಿ ಅವರು ನರೇಗಾದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ. ಯಾವಾಗಲೂ ರಾಜಕೀಯದಲ್ಲಿ ಆರೋಗ್ಯಕರ ಪ್ರಜಾಪ್ರಭುತ್ವ ಇರಬೇಕು. ಒಳ್ಳೆಯದು ಮಾಡಿದಾಗ ಹೊಗಳಬೇಕು" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಶ್ಲಾಘಿಸಿದರು.
ಕನಕಪುರದಲ್ಲಿ ಹೆರಿಗೆ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, "ಸಂಸದರು ಯಾವಾಗ ನಿದ್ದೆ ಮಾಡ್ತಾರೋ ಗೊತ್ತಿಲ್ಲ. ಕನಕಪುರಕ್ಕೆ ಮೂರು ಕಣ್ಣು ಇದೆ ಅಂತ ಕೆಲವರು ಹೇಳ್ತಾರೆ. ಅದು ಯಾವುದು ಎಂದರೆ, ಡಿಕೆ ಸುರೇಶ್, ಡಿ.ಕೆ ಶಿವಕುಮಾರ್ ಮತ್ತು ಎಂಎಲ್ಸಿ ರವಿ ಅವರು. ಈ ಮೂವರು ಕ್ಷೇತ್ರದ ಅಭಿವೃದ್ಧಿಯಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲದೇ ಕೆಲಸ ಮಾಡಿದ್ದಾರೆ" ಎಂದು ಡಿ.ಕೆ ಬ್ರದರ್ಸ್ ಅನ್ನು ಸಚಿವರು ಹಾಡಿ ಹೊಗಳಿದ್ದಾರೆ. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ಆರೋಪ, ಈ ಬಾರಿ ರಾಹುಲ್ ಗಾಂಧಿ ವಿರುದ್ಧ ಕ್ರಮ; ಪ್ರಹ್ಲಾದ್ ಜೋಶಿ