ಬೀದರ್​: ಮಾಲತಿ ಖೇಣಿ ಸ್ಮರಣಾರ್ಥ ಕ್ರಿಕೆಟ್​ ಪಂದ್ಯಾವಳಿಗೆ ಚಾಲನೆ ನೀಡಿದ ಹ್ಯಾಟ್ರಿಕ್​ ಹೀರೋ - Etv Bharat Kannada News

🎬 Watch Now: Feature Video

thumbnail

By

Published : Jan 9, 2023, 5:55 PM IST

Updated : Feb 3, 2023, 8:38 PM IST

ಬೀದರ್: ನಗರದಲ್ಲಿ ನಡೆದ ಉದ್ಯಮಿ ಅಶೋಕ್​ ಖೇಣಿ ತಾಯಿ ಮಾಲತಿ ಖೇಣಿ ಸ್ಮರಣಾರ್ಥ ಕ್ರಿಕೆಟ್​ ಪಂದ್ಯಾವಳಿಗೆ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಚಾಲನೆ ನೀಡಿದರು. ಬೀದರ್ ತಾಲೂಕಿನ ನದಿನಗರದ ಪಶು ವೈದ್ಯಕೀಯ ವಿವಿ ಮೈದಾನದಲ್ಲಿ ಕ್ರಿಕೆಟ್​ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ, ಶಿವರಾಜಕುಮಾರ್​ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ವೇದಿಕೆಯಲ್ಲಿ ವೇದ, ರಾಜಕುಮಾರ ಚಿತ್ರದ ಹಾಡುಗಳನ್ನು ಹಾಡಿ, ತಮ್ಮ ಡೈಲಾಗ್​ನಿಂದ ಅಭಿಮಾನಿಗಳನ್ನು ರಂಜಿಸಿದರು. ಈ ವೇಳೆ, ನೆರೆದಿದ್ದವರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜೊತೆಗೆ ಪೊಲೀಸರು ಲಘು ಲಾಠಿ ಪ್ರಹಾರ​ ನಡೆಸಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ರಹೀಂಖಾನ್, ಅಶೋಕ್ ಖೇಣಿ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಿದ್ದರು.
Last Updated : Feb 3, 2023, 8:38 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.