ಹರಿಯಾಣ ಪ್ರವಾಸೋದ್ಯಮ: ಪಿಂಜೋರ್ನಲ್ಲಿ ಹಾಟ್ ಏರ್ ಬಲೂನ್ ಸಫಾರಿಗೆ ಸಿಎಂ ಖಟ್ಟರ್ ಚಾಲನೆ-ವಿಡಿಯೋ - ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
🎬 Watch Now: Feature Video
Published : Nov 8, 2023, 11:20 AM IST
ಪಿಂಜೋರ್(ಹರಿಯಾಣ): ಹರಿಯಾಣದ ಪಂಚಕುಲ್ ಜಿಲ್ಲೆಯ ಪಿಂಜೋರ್ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿ ಹಲವು ಇತಿಹಾಸ ಪ್ರಸಿದ್ಧ ತಾಣಗಳು, ದೇವಾಲಯಗಳು, ಪುರಾಣ ಪ್ರಸಿದ್ಧ ಸ್ಥಳಗಳನ್ನು ಕಾಣಬಹುದು. ಇಲ್ಲಿನ ಪ್ರವಾಸಿ ತಾಣಗಳು ಪ್ರತಿವರ್ಷ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಇದಕ್ಕೆ ಪೂರಕವಾಗಿ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಪಿಂಜೋರ್ನಲ್ಲಿ ಹಾಟ್ ಏರ್ ಬಲೂನ್ ಸಫಾರಿ ಉದ್ಘಾಟಿಸಿದರು. ಪಿಂಜೋರ್ ಅನ್ನು ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿ ಮಾರ್ಪಡಿಸುವ ಮುಖ್ಯ ಉದ್ದೇಶದೊಂದಿಗೆ ಹಾಟ್ ಏರ್ಬಲೂನ್ ಸಫಾರಿಗೆ ಅವರು ಚಾಲನೆ ನೀಡಿದರು.
ಈ ವೇಳೆ ಇತರೆ ಸಚಿವರು, ಶಾಸಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಬಳಿಕ ಸಿಎಂ ಮನೋಹರ್ ಖಟ್ಟರ್ ಅವರು ಹಾಟ್ ಏರ್ ಬಲೂನ್ನಲ್ಲಿ ಸಂಚರಿಸಿ ಸಫಾರಿಯ ಅನುಭವ ಪಡೆದುಕೊಂಡರು. ತಮ್ಮ ಬೆಂಬಲಿಗರಿಗೆ ಆಗಸದಿಂದಲೇ ಕೈ ಬೀಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹರಿಯಾಣದಲ್ಲಿಯೂ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಇಂದು ಪಿಂಜೋರ್ನಲ್ಲಿ ಹಾಟ್ ಏರ್ ಬಲೂನ್ಗೆ ಚಾಲನೆ ನೀಡಲಾಗಿದೆ. ಈ ಬಗ್ಗೆ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗುತ್ತಿತ್ತು. ಆದರೆ ಇದೀಗ ಸಫಾರಿ ಉದ್ಘಾಟಿಸಲಾಗಿದೆ ಎಂದು ಹೇಳಿದರು. ಪಿಂಜೋರ್ ಪೌರಾಣಿಕ ಹಿನ್ನೆಲೆ ಹೊಂದಿದೆ. ಪಿಂಜೋರ್ ಮೊದಲು ಪಂಚಪುರ ಎಂದು ಕರೆಯಲ್ಪಡುತ್ತಿತ್ತು. ಇಲ್ಲಿ ಪಾಂಡವರು ತಮ್ಮ ವನವಾಸದ ಸಂದರ್ಭದಲ್ಲಿ ನೆಲೆಸಿದ್ದರು ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ: 28 ದಿನದಲ್ಲಿ ₹2 ಕೋಟಿಗೂ ಅಧಿಕ ಹಣ ಸಂಗ್ರಹ-ವಿಡಿಯೋ