ಮೊದಲ ರ‍್ಯಾಂಕ್​ನ ಗುಟ್ಟು ಬಿಟ್ಟುಕೊಟ್ಟ ಇಶಿತಾ ಕಿಶೋರ್.. ಹೇಗಿತ್ತು ಗೊತ್ತಾ ಇವರ ತಯಾರಿ!

🎬 Watch Now: Feature Video

thumbnail

ಹೊಸದಿಲ್ಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (ಸಿಎಸ್‌ಇ) 2022- 23ರಲ್ಲಿ ಇಶಿತಾ ಕಿಶೋರ್ ಅವರು ನಂಬರ್ ಒನ್​ ರ‍್ಯಾಂಕ್‌ ಗಳಿಸಿದ್ದಾರೆ. ಇಶಿತಾ ಅವರು ರಾಜಕೀಯ ವಿಜ್ಞಾನ ಮತ್ತು ಅಂತಾರಾಷ್ಟ್ರೀಯ ಸಂಬಂಧವನ್ನು ತಮ್ಮ ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು UPSCಯಲ್ಲಿ ಅಗ್ರಜಳಾಗಿ ತೇರ್ಗಡೆಯಾಗಿದ್ದಾರೆ.

ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಪ್ರಿಲಿಮ್ಸ್‌ನಲ್ಲಿ ವಿಫಲವಾದ ನಂತರ ಇಶಿತಾ ಅವರು ಕಠಿಣ ಪ್ರಯತ್ನ ಹಾಗೂ ದೃಢನಿಶ್ಚಯದಿಂದ ಪರೀಕ್ಷೆಗೆ ತಯಾರಿ ನಡೆಸಿದ್ದರು.  ಮಂಗಳವಾರ ಫಲಿತಾಂಶ ಪ್ರಕಟವಾದ ಪರೀಕ್ಷೆಯಲ್ಲಿ ಗರಿಮಾ ಲೋಹಿಯಾ, ಉಮಾ ಹರತಿ ಎನ್ ಮತ್ತು ಸ್ಮೃತಿ ಮಿಶ್ರಾ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ರ‍್ಯಾಂಕ್‌ ಗಳಿಸಿದ್ದಾರೆ. ದೆಹಲಿ ವಿಶ್ವವಿದ್ಯಾಲಯದೊಂದಿಗೆ ಸಂಯೋಜಿತವಾಗಿರುವ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನಿಂದ 2017ರಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ಬಹುರಾಷ್ಟ್ರೀಯ ಸೇವೆಗಳ ಪಾಲುದಾರಿಕೆ ಸಂಸ್ಥೆಯಾದ ಅರ್ನ್ಸ್ಟ್ ಮತ್ತು ಯಂಗ್‌ನಲ್ಲಿ ಉದ್ಯೋಗಿಯಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, "ನನ್ನ ದೇಶಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ಸಿಕ್ಕಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಮತ್ತು ನಾನು ಅದನ್ನು ಉತ್ತಮವಾಗಿ ಮಾಡಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಇಶಿತಾ ತಿಳಿಸಿದ್ದಾರೆ. ಅವಿರತ ಶ್ರಮ, ಸೆಲ್ಫ್​ ಕಾನ್ಸಿಡೆನ್ಸ್​​ ಸಮಚಿತ್ತದ ಓದು ನನ್ನ ಯಶಸ್ಸಿಗೆ ಕಾರಣ ಎಂದು ಅವರು ಹೇಳಿಕೊಂಡಿದ್ದಾರೆ.

 ತನ್ನ ಜೀವನದುದ್ದಕ್ಕೂ ಸಕ್ರಿಯ ಕ್ರೀಡಾಪಟುವಾಗಿದ್ದ ಇಶಿತಾ ತನ್ನ ಶಾಲಾ ದಿನಗಳಿಂದಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಳು ಎಂದು ಅವರ ತಾಯಿ ಜ್ಯೋತಿ ಕಿಶೋರ್ ಹೇಳಿದ್ದಾರೆ. ಆದರೆ ಸಿವಿಲ್ ಸರ್ವಿಸಸ್ ಅನ್ನು ಭೇದಿಸುವುದು ಸುಲಭವಾಗಿರಲಿಲ್ಲ. ಅವರು ತಮ್ಮ ಮೂರನೇ ಪ್ರಯತ್ನದಲ್ಲಿ ದೇಶದ ಅತ್ಯಂತ ಸಮಗ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: ನಾಗರಿಕ ಸೇವಾ ಪರೀಕ್ಷೆ ಫಲಿತಾಂಶ ಪ್ರಕಟ..ಇಶಿತಾ ಕಿಶೋರ್​ ಈ ವರ್ಷದ ಟಾಪರ್​

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.