ಶಿವಮೊಗ್ಗ: ಹಾಫ್ ಹೆಲ್ಮೆಟ್ ವಶಕ್ಕೆ; ಹೆಲ್ಮೆಟ್ ಅಂಗಡಿಗಳ ಮೇಲೆ ಸಂಚಾರಿ ಪೊಲೀಸರ ದಾಳಿ - ಹಾಫ್ ಹೆಲ್ಮೆಟ್ ಮಾರಾಟ
🎬 Watch Now: Feature Video
ಶಿವಮೊಗ್ಗ: ನಗರದಲ್ಲಿ ಹಾಫ್ ಹೆಲ್ಮೆಟ್ ಧರಿಸಿ ಸಂಚರಿಸುತ್ತಿದ್ದ ದ್ವಿಚಕ್ರ ಸವಾರರು ಮತ್ತು ಹಾಫ್ ಹೆಲ್ಮೆಟ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸಂಚಾರಿ ಪೊಲೀಸರು ದಾಳಿ ನಡೆಸಿದ್ದಾರೆ. ವಾಹನ ಸವಾರರ ಹೆಲ್ಮೆಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ಹಾಗೂ ಭದ್ರಾವತಿ ಪಟ್ಟಣದ ವಿವಿಧ ಹೆಲ್ಮೆಟ್ ಅಂಗಡಿಗಳ ದಾಳಿ ಮಾಡಿದ ಪೊಲೀಸರು, ಐಎಸ್ಐ ಮಾರ್ಕ್ ಇಲ್ಲದ ಮತ್ತು ಹಾಫ್ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದರು. ಶಿವಮೊಗ್ಗದಲ್ಲಿ 600 ಹಾಗೂ ಭದ್ರಾವತಿಯ 141 ಅಂಗಡಿಗಳ ಮೇಲೆ ಸೇರಿ ಒಟ್ಟು 741 ಅಂಗಡಿಗಳ ಮೇಲೆ ದಾಳಿ ನಡೆಸಿದರು. ಅಂಗಡಿ ಮಾಲೀಕರಿಗೆ ಐಎಎಸ್ ಮಾರ್ಕ್ ಇಲ್ಲದ ಹೆಲ್ಮೆಟ್ ಮಾರಾಟದಂತೆ ತಿಳುವಳಿಕೆ ನೋಟಿಸ್ ನೀಡಲಾಗಿದೆ.
ಸವಾರರ ಹಾಫ್ ಹೆಲ್ಮೆಟ್ ವಶಕ್ಕೆ: ಶಿವಮೊಗ್ಗ ನಗರದ ವಿವಿಧೆಡೆ ದಿಢೀರ್ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಫ್ ಹೆಲ್ಮೆಟ್‌ಗಳನ್ನು ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದವರ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದರು. ಕಾರ್ಯಾಚರಣೆಯಲ್ಲಿ ಸುಮಾರು 1000ಕ್ಕೂ ಅಧಿಕ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು ವಾಹನದಲ್ಲಿ ತುಂಬಿಕೊಂಡು ಠಾಣೆಗೆ ಹೋಗಿದ್ದಾರೆ. ಹಾಫ್ ಹೆಲ್ಮೆಟ್ ಧರಿಸುವವರ ವಿರುದ್ಧ ಮೋಟಾರ್ ವಾಹನ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ನೋಯ್ಡಾದಲ್ಲಿ 400ಕ್ಕೂ ಹೆಚ್ಚು ವಾಹನಗಳು ಜಲಾವೃತ! ಈ ದೃಶ್ಯವನ್ನೊಮ್ಮೆ ನೋಡಿ