Guru Purnima: ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಜೃಂಭಣೆಯಿಂದ ನಡೆದ ಗುರುಪೂರ್ಣಿಮಾ ಉತ್ಸವ - ಈಟಿವಿ ಭಾರತ್ ಕರ್ನಾಟಕ
🎬 Watch Now: Feature Video
ಶಿರಡಿ (ಮಹಾರಾಷ್ಟ್ರ) : ಶಿರಡಿಯಲ್ಲಿ ಗುರುಪೂರ್ಣಿಮಾ ಹಬ್ಬವು ಭಕ್ತಿ ಭಾವದಿಂದ ಆರಂಭವಾಗಿದೆ. ಸಾವಿರಾರು ಭಕ್ತರು ಸಾಯಿನಾಮವನ್ನು ಪಠಿಸುತ್ತ ಶಿರಡಿಯನ್ನು ಪ್ರವೇಶಿಸುತ್ತಿದ್ದಾರೆ. ಸಬ್ಕಾ ಮಾಲಿಕ್ ಏಕ್ (ಎಲ್ಲರ ಮಾಲೀಕ ಒಬ್ಬನೇ) ಎಂಬ ಸಂದೇಶವನ್ನು ನೀಡಿದ್ದ ಶ್ರೀ ಸಾಯಿಬಾಬಾ ಅವರನ್ನು ಗುರುವಾಗಿ ನೋಡುವ ಅಸಂಖ್ಯಾತ ಭಕ್ತರು ತಮ್ಮ ಭಕ್ತಿಯನ್ನು ಸಲ್ಲಿಸಿದ್ದಾರೆ.
ಇಂದು ಬೆಳಗ್ಗೆ ಕಾಕಡ ಆರತಿಯ ನಂತರ ಸಾಯಿ ಮಂದಿರದಿಂದ ಸಾಯಿ ಪ್ರತಿಮೆಗಳು, ವೀಣೆ ಮತ್ತು ಸಾಯಿ ಸಚ್ಚರಿತ್ರ ಗ್ರಂಥಗಳನ್ನು ಮೆರವಣಿಗೆ ಮಾಡಲಾಯಿತು. ಅಖಂಡ ಪಾರಾಯಣ ಪಠಣದೊಂದಿಗೆ ಗುರುಪೂರ್ಣಿಮ ಹಬ್ಬ ನಡೆದಿದೆ. ಈ ವೇಳೆ, ಕಣ್ಮನ ಸೆಳೆಯುವ ಆಕರ್ಷಕ ವಿದ್ಯುತ್ ದೀಪಾಲಂಕಾರವನ್ನು ದೇವಾಲಯಕ್ಕೆ ಮಾಡಲಾಗಿತ್ತು. ಜೊತೆಗೆ ಹೂವಿನ ಅಲಂಕಾರವನ್ನು ಮಾಡಲಾಗಿದೆ.
ಸಾಯಿ ಸಂಸ್ಥಾನದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಸಮಿತಿ ಸದಸ್ಯ ಸಿದ್ಧರಾಮ ಸಾಲಿಮಠ ಅವರು ಬಾಬ ಜೀವನ ಚರಿತ್ರೆಯ ಮೊದಲ ಅಧ್ಯಾಯವನ್ನು ಪಠಿಸಿದರು. ನಂತರ ಭಕ್ತರು ಬಾಬ ಜೀವನ ಚರಿತ್ರೆಯನ್ನು ಪಠಿಸುವುದನ್ನು ಮುಂದುವರೆಸಿದ್ದಾರೆ. ಸೋಮವಾರ ಬೆಳಗ್ಗೆ ಈ ವಚನಗೋಷ್ಠಿ ಮುಕ್ತಾಯವಾಗಲಿದೆ. ಮತ್ತೊಂದು ವಿಶೇಷವೆನೆಂದರೆ ಗುರುಪೂರ್ಣಿಮೆಯಂದು ಸಾಯಿಸಮಾಧಿ ರಾತ್ರಿಯಿಡೀ ತೆರೆದಿರುತ್ತದೆ.
ಶಿರಡಿಯಲ್ಲಿ 13 ಜುಲೈ 1908 ರಂದು ಪ್ರಾರಂಭವಾದ ಸಾಯಿಬಾಬಾ ಅವರ ಗುರುಪೂರ್ಣಿಮೆ ಆಚರಣೆಗಳು ನೂರು ವರ್ಷಗಳ ಗತಕಾಲದ ಸಂಪ್ರದಾಯ ಹೊಂದಿದೆ. ವಿಶೇಷವಾಗಿ ಗುರುಪೂರ್ಣಿಮೆಯಂದು ಸಾಯಿಬಾಬಾ ಅವರ ದರ್ಶನ ಪಡೆಯಲು ಅನೇಕ ಭಕ್ತರು ಶಿರಡಿಗೆ ಬರುತ್ತಾರೆ.
ಇದನ್ನೂ ಓದಿ : ಶಿರಡಿ ಸಾಯಿ ಸಂಸ್ಥಾನಕ್ಕೆ ಒಂದು ಕೋಟಿ ರೂ ದೇಣಿಗೆ ನೀಡಿದ ಭಕ್ತ.. ಹರಿದು ಬರುತ್ತಲೇ ಇದೆ ಭಕ್ತ ಸಾಗರ