ಹಾವೇರಿ: ದೇಶ ಸೇವೆ ಬಳಿಕ ಸ್ವಗ್ರಾಮಕ್ಕೆ ಬಂದ ಸೈನಿಕನಿಗೆ ಅದ್ಧೂರಿ ಸ್ವಾಗತ - ಭಾರತೀಯ ಸೇನೆ

🎬 Watch Now: Feature Video

thumbnail

By

Published : Aug 2, 2023, 8:57 PM IST

ಹಾವೇರಿ: ಭಾರತೀಯ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಆಗಮಿಸಿದ ಹಾವೇರಿ ಜಿಲ್ಲೆ ಸವಣೂರು ತಾಲೂಕು ಕಡಕೋಳ ಗ್ರಾಮದ ಕರಬಸಪ್ಪ ಸುಭಾಸ ಗುಜರಿ ಅವರನ್ನು ಹಾವೇರಿಯಲ್ಲಿ ಮಾಜಿ ಸೈನಿಕರು ಹಾಗೂ ದೇಶಾಭಿಮಾನಿಗಳು, ಕರಬಸಪ್ಪ ಸಂಬಂಧಿಕರು ಅದ್ಧೂರಿಯಾಗಿ ಬರಮಾಡಿಕೊಂಡರು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಮಾಲಾರ್ಪಣೆ ಮಾಡಿ ತೆರೆದ ವಾಹನದಲ್ಲಿ ಕರಬಸಪ್ಪ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಹೋಗಲಾಯಿತು.

ಪರಸ್ಪರ ಆಲಿಂಗನ ಮಾಡಿಕೊಂಡು ಶುಭ ಹಾರೈಸಿದ್ದು, ದೇಶಾಭಿಮಾನಿಗಳು ಮಾಜಿ ಸೈನಿಕನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಹೊಸಮನಿ ಸಿದ್ದಪ್ಪ ವೃತ್ತದಿಂದ ಆರಂಭವಾದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ತೆರೆದ ವಾಹನದಲ್ಲಿ ಸಾಗಿದ ಕರಬಸಪ್ಪ ಅವರು ಸೆಲ್ಯೂಟ್ ಹೊಡೆಯುವ ಮೂಲಕ ದೇಶಾಭಿಮಾನಿಗಳ ಪ್ರೀತಿಗೆ ಧನ್ಯವಾದ ಅರ್ಪಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಕರಬಸಪ್ಪ ಸೇನೆಯಲ್ಲಿ 19 ವರ್ಷ ಸೇವೆ ಸಲ್ಲಿಸಿ ಜುಲೈ 31 ರಂದು ನಿವೃತ್ತಿಯಾಗಿದ್ದೇನೆ. ಇವತ್ತು ಸ್ವಗ್ರಾಮಕ್ಕೆ ಬಂದಿದ್ದು, ಜನರ ಪ್ರೀತಿಗೆ ಆಭಾರಿಯಾಗಿದ್ದೇನೆ. ಅಲ್ಲದೆ ದೇಶದ ಯುವಕರು ಹೆಚ್ಚು ಹೆಚ್ಚು ಸೇನೆಯತ್ತ ಆಕರ್ಷಿತರಾಗಬೇಕು. ಸೈನ್ಯಕ್ಕೆ ಸೇರಿ ಭಾರತಾಂಬೆಯ ಸೇವೆ ಮಾಡಬೇಕು. ಅದ್ಧೂರಿಯಾಗಿ ಬರಮಾಡಿಕೊಂಡ ಅಭಿಮಾನಿಗಳಿಗೆ ಮಾಜಿ ಸೈನಿಕರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: ಸ್ವಗ್ರಾಮಕ್ಕೆ ಮರಳಿದ ಮಾಜಿ ಸೈನಿಕನಿಗೆ ಅದ್ಧೂರಿ ಸ್ವಾಗತ-ಸಂಭ್ರಮ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.