ಬೆಳಗಾವಿಯಲ್ಲಿ 'ದುರ್ಗಾ ಮಾತಾ ದೌಡ್'ಗೆ ಅದ್ಧೂರಿ ಸ್ವಾಗತ - ಛತ್ರಪತಿ ಶಿವಾಜಿ ಮಹಾರಾಜರ ವೇಷ ಭೂಷಣ
🎬 Watch Now: Feature Video
Published : Oct 15, 2023, 5:15 PM IST
ಬೆಳಗಾವಿ: ಕುಂದಾನಗರಿಯಲ್ಲಿ ದಸರಾ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನವರಾತ್ರಿ ಅಂಗವಾಗಿ ಪ್ರತಿ ವರ್ಷದಂತೆ 9 ದಿನಗಳ ದುರ್ಗಾ ಮಾತಾ ದೌಡ್‌ಗೆ (ಓಟ) ಅದ್ಧೂರಿ ಸ್ವಾಗತ ಸಿಕ್ಕಿದೆ.
ದೇಶ, ಧರ್ಮ ಪ್ರೇಮ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಇಲ್ಲಿನ ಶಿವಪ್ರತಿಷ್ಠಾನ ಹಿಂದುಸ್ಥಾನ ಸಂಘಟನೆಯಿಂದ ಕಳೆದ 21 ವರ್ಷಗಳಿಂದ ದುರ್ಗಾ ಮಾತಾ ದೌಡ್ ಆಯೋಜಿಸಲಾಗುತ್ತಿದೆ. ಭಾನುವಾರ ಬೆಳಿಗ್ಗೆ ನಗರದ ಶಿವಾಜಿ ಉದ್ಯಾನದಲ್ಲಿ ದೌಡ್‌ಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು.
ಶ್ವೇತವಸ್ತ್ರ ಧರಿಸಿ, ತಲೆಗೆ ಕೇಸರಿ ಮುಂಡಾಸು ತೊಟ್ಟು, ಸೊಂಟಕ್ಕೆ ಹಳದಿ, ಕೇಸರಿ ಶಾಲು ಕಟ್ಟಿಕೊಂಡು ಓಟದಲ್ಲಿ ಭಾಗಿಯಾಗಿ ಭಕ್ತರು ಗಮನ ಸೆಳೆದರು. ಭಾರತ್ ಮಾತಾ ಕಿ ಜೈ, ಜೈ ಭವಾನಿ, ಜೈ ಶಿವಾಜಿ ಘೋಷಣೆಗಳನ್ನು ಮೊಳಗಿಸಿದರು. ಜೀಜಾ ಮಾತಾ, ಛತ್ರಪತಿ ಶಿವಾಜಿ ಮಹಾರಾಜರ ವೇಷಭೂಷಣ ತೊಟ್ಟು ಚಿಣ್ಣರು ಸಂಭ್ರಮಿಸಿದರು.
ದೌಡ್ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಂಗೋಲಿ ಬಿಡಿಸಿ ಬೀದಿಯನ್ನು ಶೃಂಗರಿಸಲಾಗಿತ್ತು. ಕೈಯಲ್ಲಿರುವ ಭಗವಾಧ್ವಜಕ್ಕೆ ಮಾಲಾರ್ಪಣೆ ಮಾಡಿ ನಗರದ ಪ್ರಮುಖ ಮಂದಿರಗಳಿಗೆ ತೆರಳಿ ಮಂಗಳಾರತಿ ಮಾಡಿ ಮಹಿಳೆಯರು ಪೂಜೆ ಸಲ್ಲಿಸಿದರು.
ಶಿವಾಜಿ ಉದ್ಯಾನದಿಂದ ಆರಂಭವಾಗಿ ಹುಲಬತ್ತೆ ಕಾಲೊನಿ, ಮಹಾತ್ಮಾ ಫುಲೆ ರಸ್ತೆ, ಎಸ್.ಪಿ.ಎಂ.ರಸ್ತೆ, ಶಾಸ್ತ್ರಿ ನಗರ, ಕಪಿಲೇಶ್ವರ ಕಾಲೊನಿ, ಮಹಾದ್ವಾರ ರಸ್ತೆ, ಸಮರ್ಥ ನಗರ, ಸಂಭಾಜಿ ಗಲ್ಲಿ ಮಾರ್ಗವಾಗಿ ಆಗಮಿಸಿದ ದೌಡ್, ಕಪಿಲೇಶ್ವರ ಮಂದಿರದಲ್ಲಿ ಮುಕ್ತಾಯವಾಯಿತು.
ಇದನ್ನೂಓದಿ: ಕನ್ನಡ ನಮ್ಮ ಶೃತಿ ಆಗಬೇಕು, ಅದರ ಅಭಿವೃದ್ಧಿ ಕೃತಿ ಆಗಬೇಕು: ಹಂಸಲೇಖ ದಸರಾ ಉದ್ಘಾಟನಾ ಭಾಷಣ