ಸಿಎಂ ಬದಲಾವಣೆ ಕೇವಲ ಊಹಾಪೋಹ: ಗೋವಿಂದ ಕಾರಜೋಳ - govinda karajola to vijayapura
🎬 Watch Now: Feature Video
ವಿಜಯಪುರ: ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಅಂಥಹ ಗಾಳಿ ಸುದ್ದಿಯನ್ನು ಯಾರೂ ನಂಬುವುದಿಲ್ಲ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. ಜಿಲ್ಲೆಯ ನಾಗಠಾಣದಲ್ಲಿ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಉದ್ಘಾಟಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು. ಪದೇ ಪದೆ ಸಿಎಂ ಜೊತೆ ತಾವು ದೆಹಲಿಗೆ ಭೇಟಿ ನೀಡಿ ವರಿಷ್ಠರೊಂದಿಗೆ ಮಾತುಕತೆ ನಡೆಸುತ್ತಿದ್ದೀರಿ. ಹೀಗಾಗಿ ಕಾರ್ಯಕರ್ತರಲ್ಲಿ ಅನುಮಾನ ಮೂಡಿರಬಹುದೇ? ಎನ್ನುವ ಪ್ರಶ್ನೆಗೆ ದೆಹಲಿಗೆ ಹೋಗುವುದು ನಮ್ಮ ಇಲಾಖೆ ಕೆಲಸದ ಮೇಲೆ ಹೊರತು ಅಲ್ಲಿ ಯಾವ ರಾಜಕಾರಣ ಮಾಡಲು ಅಲ್ಲ. ಇಂಥಹ ಗಾಳಿ ಸುದ್ದಿಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು ಎಂದರು. ತಾವು ಸಿಎಂ ರೇಸ್ನಲ್ಲಿದ್ದೀರಾ? ಎನ್ನುವ ಪ್ರಶ್ನೆಗೆ ನಾನೇನಾದರೂ ಹೇಳಿದ್ದೇನಾ, ತಾವು ಸಿಎಂ ರೇಸ್ನಲ್ಲಿ ಇಲ್ಲವೆಂದು ಸ್ಪಷ್ಟಪಡಿಸಿದರು.
Last Updated : Feb 3, 2023, 8:26 PM IST